ಸುಧಾ ಪಾಟೀಲ ಬೆಳಗಾವಿ ಕವಿತೆ-ಪ್ರಶಸ್ತಿ ಮುಕುಟ

ನನ್ನ ಕಾವ್ಯಕೆ ಬಂತು
ಪ್ರಶಸ್ತಿ ಮುಕುಟ
ಬಯಸದೆ ಬಂದ ಲಿಂಗ ಭೋಗ
ಖುಷಿ ಸಂಭ್ರಮ ಸಂತಸ ಕಿರುನಗೆ
ಪತ್ರಿಕೆ ಮಾಧ್ಯಮಗಳಲ್ಲಿ
ಸುದ್ಧಿ ಫೋಟೋಗಳು
ಊರೆಲ್ಲ ಕುಣಿದು ಕುಪ್ಪಳಿಸಿದೆ
ಎಲ್ಲ ಗೆಳೆಯ ಗೆಳತಿಯರು
ನಿರಂತರ ಶುಭಾಶಯ ಕೋರಿದರು
ಫೋನ್ ಕಿರುಗುಟ್ಟಿದವು
ಮನೆಯೊಡೆಯರಿಗೇಕೋ ಕೋಪ
ಏನು ಎಷ್ಟು ಮಾತು ಫೋನು
ಗುರಾಯಿಸಿದರು ಖುಷಿ ಹತ್ತಿಕ್ಕಿದೆ
ಅಂದು ವೇದಿಕೆಯ ಮೇಲೆ
ಶಾಲು ಸತ್ಕಾರ ಸಂಭ್ರಮ
ಸಾಹಿತಿಗಳ ಸ್ವಾಮಿಗಳ ಹರಕೆ
ಆಶೀರ್ವಚನ ಹಿತ ನುಡಿ
ನಂಗೂ ಮಾತನಾಡಲೂ ಹೇಳಿದರು
ಹೆಣ್ಣು ಅಬಲೆಯಲ್ಲ ಶಕ್ತಿ
ಕಾಳಿ ದುರ್ಗೆ ಚಾಮುಂಡಿ
ಸ್ವಾವಲಂಭನೆ ಸ್ವಾಭಿಮಾನದ
ಬದುಕಿಗೆ ಕರೆ ಕೊಟ್ಟೆ
ಮನೆಯಿಂದ ಫೋನ್ ಬಂತು
ಭಾಷಣ ಮುಗಿಸಿದೆ
ಎಲ್ಲರೂ ಊಟಕ್ಕೆ ಒತ್ತಾಯ ಮಾಡಿದರು
ನಾನೋ ಆಟೋ ಹಿಡಿದು ಮನೆಗೆ
ಯಜಮಾನರು ಬಾಗಿಲಲ್ಲೇ ನಿಂತಿದ್ದರು
ಸೆರಗಿನಲ್ಲಿ ಪ್ರಶಸ್ತಿ ಮುಚ್ಚಿಟ್ಟೆ
ಹಿಂದೆ ಬರೆದ ಕವನ ಸಂಕಲನ
ಹೆಜ್ಜೆ ಗುರುತು ಮುಚ್ಚಿಟ್ಟ ಹಾಗೆ
ಈಗ ಅದಕ್ಕೆ ಪ್ರಶಸ್ತಿ ಬಂದರೂ
ಖುಶಿಯಾಗಿ ಹೇಳುವ ಹಾಗಿಲ್ಲ
ನ ಸ್ತ್ರೀ ಸ್ವಾತಂತ್ರ್ಯ ಅರ್ಹ
ಮನು ಮಹರ್ಷಿ ಮಾತಿಗೆ

ಮುನಿಸಿ ಮೌನವಾದೆ


8 thoughts on “ಸುಧಾ ಪಾಟೀಲ ಬೆಳಗಾವಿ ಕವಿತೆ-ಪ್ರಶಸ್ತಿ ಮುಕುಟ

  1. ಸುಂದರ ವಿಡಂಬನೆ ಕವನ ಮೇಡಂ.
    ನಿಮ್ಮ ಕರ್ಕಿ ಕಾವ್ಯ ಪ್ರಶಸ್ತಿಗೆ ಅಭಿನಂದನೆಗಳು

  2. ವಾಸ್ತವದ ಅಭಿವ್ಯಕ್ತಿ ತುಂಬಾ ಚೆನ್ನಾಗಿ ವ್ಯಕ್ತಪಡಿಸಿದ್ದೀರಿ ಮೇಡಂ ಧನ್ಯವಾದಗಳು ಮತ್ತಷ್ಟು ಇಂಥ ಪ್ರಶಸ್ತಿಗಳು ತಮ್ಮ ಮುಡಿಗೇರಲಿ ಎಂದು ಹಾರೈಸುತ್ತೇನೆ

Leave a Reply

Back To Top