ಕಾವ್ಯ ಸಂಗಾತಿ
ತಿಲಕಾ ನಾಗರಾಜ್ ಹಿರಿಯಡಕ
ಹಾಗೇ ಸುಮ್ಮನೆ
ಹಾಗೇ ಸುಮ್ಮನೆ
ಸೋತು ನೋಡು ಒಂದು ಬಾರಿ
ತಿಳಿಯಲು ನಿನ್ನವರು ಯಾರೆಂದು
ಹಾಗೇ ಸುಮ್ಮನೆ
ಸೋತು ನೋಡು ಒಂದು ಬಾರಿ
ತಿಳಿಯಲು ನಿನ್ನ ಕಷ್ಟದಲಿ ಕೈ
ಹಿಡಿಯಲು ಇರುವರೇ ಎಂದು
ಹಾಗೇ ಸುಮ್ಮನೆ
ಸೋತು ನೋಡು ಒಂದು ಬಾರಿ
ತಿಳಿಯಲು ನೀ ನಗಿಸಿದಾಗ ನಕ್ಕವರು
ಅತ್ತಾಗ ಅಳುವರೇ ಎಂದು
ಹಾಗೇ ಸುಮ್ಮನೆ
ಸೋತು ನೋಡು ಒಂದು ಬಾರಿ
ಜಗದ ಚಿಂತೆಗಳಿಗೆ ಬೆನ್ನುಹಾಕಿ
ಶಾಂತಿಯ ತೋಟದೊಳಗೆ ಸುಖವನರಸಲು.
ತಿಲಕಾ ನಾಗರಾಜ್ ಹಿರಿಯಡಕ