ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಕಿತ್ತೋದ ವ್ಯವಸ್ಥೆಯೊಳಗೆ
ಕಿತ್ತೋದ ವ್ಯವಸ್ಥೆಯೊಳಗೆ
ಸತ್ತು ಬದುಕಿದವರು ನಾವು
ಇದೊಂದು ದೇಶ
ಇಲ್ಲಿ ಸರ್ವಾಧಿಕಾರಿಗಳ ರಾಜ್ಯ
ಕಳ್ಳರ ಲೂಟಿಕೋರರ ಆಡಳಿತ
ಐದು ವರುಷಕ್ಕೊಮ್ಮೆ ಚುನಾವಣೆ
ಸಾಲಾಗಿ ನಿಂತು ನಮ್ಮ ನಮ್ಮ
ಆಧಾರ ಕಾರ್ಡ್ ತೋರಿಸಿ
ಮತ ಹಾಕ ಬೇಕು ಬಟನ್ ಒತ್ತಬೇಕು
ಮಷೀನ್ ಮಹಾತ್ಮೆ
ಯಾರಿಗಾದರೂ ಒಲಿಯಬಹುದು
ಒದೆಯಬಹುದು
ನಮಗೇನು ಮಾಡುವುದು
ಮತ ಹಾಕುವುದಷ್ಟೇ ನಮ್ಮ ಕೆಲಸ
ಬೆಲೆಗಳು ಗಗನ ದಾಟಿ ಹೋಗಿವೆ
ಎಲ್ಲದರ ಮೇಲೂ ಜಿ ಎಸ ಟಿ ತೆರಿಗೆ
ರಾಮ ರಹಿಮರಿಗೆ ಕದನ ಹಚ್ಚಿದ್ದಾರೆ
ಇಲ್ಲ ಕಾರ್ಯಾಂಗ
ನ್ಯಾಯಾಂಗ ಶಾಸಕಾಂಗ
ಮಾಧ್ಯಮ ಟಿವಿಯವರು
ಮಾರಾಟವಾಗಿದ್ದಾರೆ.
ಹಲವು ಹಗರಣಗಳ ಸರಮಾಲೆ
ಯಾರಿಗೂ ಶಿಕ್ಷೆಯಾಗಿಲ್ಲ
ಓಡಿ ಹೋದ ನೀರವ ಮಲ್ಯ
ಇತರರು ಮರಳಿ ಬರುವದಿಲ್ಲ
ಸಾಲ ಹೊರೆಸಿ ದೇಶ ಮಾರಿದರು
ಇತ್ತ ಕಾರ್ಮಿಕ ರೈತರ ಆತ್ಮ ಹತ್ಯೆ
ಸಹಕಾರಿ ಬ್ಯಾಂಕ್ ದಿವಾಳಿಯಾದವು
ಗ್ರಾಹಕರು ರಸ್ತೆಯ ಮೇಲೆ ಗೋಳಿಟ್ಟರು
ಇವರಿಗೆ ಕಣ್ಣು ಕಿವಿ ಬಾಯಿಯಿಲ್ಲ
ಗಾಂಧಿ ಮುಂದಿನ ಮಂಗಗಳು
ಸತ್ತು ಬದುಕುತ್ತಿದ್ದೇವೆ ನಾನು ನೀವು
ಮೇರಾ ದೇಶ ಮಹಾನ್
ನಿಲ್ಲದ ಘೋಷಣೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಕಿತ್ತೋದ ವ್ಯವಸ್ಥೆಯೊಳಗೆ ಪ್ರತಿನಿತ್ಯ ಘೋಷಣೆ ಕೂಗುತ್ತಾ ಸತ್ತು ಬದುಕಿದವರು ನಾವು…ಎನ್ನುವ ಸಮಾಜದ ಆಗುಹೋಗುಗಳ ಜಿಡ್ಡುಗಟ್ಟಿದ ಮಾರ್ಮಿಕ ಕವನ ಎಲ್ಲರಿಗೂ ವಿಚಾರ ಮಾಡಲು ಹಚ್ಚುವಂತಿದೆ ಸರ್
ಸುತೇಜ
ಏನುಮಾಡುವದು ಸರ್ ಯಾರಾದರು ಬದಲಾವಣೆಯ ವ್ಯವಸ್ಥೆ ತರಬಹುದೆಂಬ ನಂಬಿಕೆ ಇಲ್ಲದಾಗಿದೆ?
Very true sir Nice lines Sir
ವಿಡಂಬನಾತ್ಮಕ ಕವನ ಸರ್, ನಿಜವಾಗಿಯೂ ನಾವು ಕಿತ್ತುಹೋದ ವ್ಯವಸ್ಥೆಯೊಳಗೆ ಬದುಕುತ್ತಿದ್ದೇವೆ ಅನಿವಾರ್ಯವಾಗಿ, ಸಮಾಜ ದಲ್ಲಿರುವ ವಸ್ತು ಸ್ಥಿತಿಯನ್ನು ನಿಮ್ಮ ಕವನದಲ್ಲಿ ಚೆನ್ನಾಗಿ ಹಿಡಿದಿಟ್ಟಿದ್ದೀರಿ
ಅತ್ಯುತ್ತಮ ಕ್ರಾಂತಿಕಾರಿ ಕವನ ಸರ್
Beautiful Strong criticism Sir
ವಿಡಂಬನಾತ್ಮಕ ಕವಿತೆ, ಸರ್, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವ ಹಾಗೆ,ಅಧಿಕಾರದ ಮದದಲಿ,ಜನಗಳೆ ಬಲಿಪಶು.
ಹೊಟ್ಟಾನ ಸಿಟ್ಟು ರಟ್ಟಾಗಿಲ್ಲ ಎನ್ನುವ ಹಾಗೆ,
ಮೂಕರೋದನ ಬಡವರದು.
Excellent poetry Hats of to Your revolutionary poetry Sir
ಕಿತ್ತೋದ ವ್ಯವಸ್ಥೆಯಲ್ಲಿ ಸತ್ತು ಬದುಕಿದವರು ನಾವು….ಆಕ್ರೋಶ.. ಬಂಡಾಯದ ಧ್ವನಿ…
Ah! So beautiful powerful expression
Excellent Poem Sir
ಕಟು ಸತ್ಯ. ವಾಸ್ತವತೆಯ ದರ್ಶನ.
Excellent…poem…sir…
Akkamahadevi