ಶರಣರು ಕಾಯಕ  ಜೀವಿಗಳು .ಶ್ರಮಜೀವಿಗಳು ನಡೆ ಮತ್ತು ನುಡಿಗಳನ್ನು ಒಂದಾಗಿಸಿಕೊಂಡು ನಡೆದು ತೋರಿದ ಮಾರ್ಗಿಗಳು.
ದಯೆಯೇ ಧರ್ಮವೆಂದು ನಂಬಿದ ವಿಶ್ವ ಮಾನವ ಪುರುಷ ಬಸವಣ್ಣನವರು ಕಲಿಸಿಹೋದ, ಕಾಯಕದೊಳಗೆ ಕರುಣೆ ,ಪ್ರೀತಿ, ಮಮತೆ ,ವಾತ್ಸಲ್ಯವನ್ನು ಅರಿತು, ಜೀವಿಸಿ ಬದುಕು ಕಟ್ಟಿ ನಡೆದ ಶರಣ ಜೀವಿಗಳಂತೆ ಇರುವ, ಇವತ್ತಿನ ಅನೇಕ ಶರಣ ಜೀವಿಗಳು ಈ ಸಮಾಜದಲ್ಲಿ ಬದುಕಿ ಬಾಳಿ  ಹೋದವರನ್ನು ನಾವು ಇಂದು ಕಾಣುತ್ತೇವೆ .ಅಂಥಹ ಶರಣ ತತ್ವವನ್ನು ರಕ್ತದ ನರ ನಾಡಿ ಗಳಲ್ಲಿ ಹರಿಯುವ ಅಮೃತ ಮಯ ತತ್ವಗಳನ್ನು ನಾನಿಂದು ಕಂಡು ಕೇಳಿದ ಮಾತುಗಳನ್ನು ನನ್ನ ಹೃದಯದಿಂದ ಬಿಚ್ಚಿ ಇಡುತ್ತಿರುವೆ .ಅಂದಿನ ಕಾಲದ ಬಸವಣ್ಣನವರು ಹೇಗೋ ಇಂದಿನ ಕಾಲದಲ್ಲಿ ಶರಣರೂ ಕೂಡಾ ಇದ್ದಾರೆ ಎನ್ನುವುದು ಸುಳ್ಳಲ್ಲ.
ಸತ್ಯದ ಮಾರ್ಗದಲ್ಲಿ ನಡೆಯುವವರಿಗೆ ಸುಳ್ಳಿನ ಗೋರೆಯನ್ನು ಕಟ್ಟುವವರು ನಮ್ಮ ಸಮಾಜದಲ್ಲಿಯೇ ಇದ್ದಾರೆ .
ಅರಿವು ,ಆಚಾರ ,ಅನುಭಾವದ ನೆಲೆಯಲ್ಲಿ ನಿಂತು ನೋಡಿದಾಗ ಮಾತ್ರ ನಮಗೆ ಸತ್ಯದ ಅನಾವರಣ ಆಗುತ್ತದೆ .ಇಂದಿನ ಮಹಿಳೆಯರು ಅದನ್ನು ಅರಿತು ನಡೆಯುವ ಕೆಲಸ ಆಗಲೇ ಬೇಕು .
ಸತ್ಯ ಯಾವುದು.? ಅಸತ್ಯ ಯಾವುದು? ಎನ್ನುವ ತಿಳುವಳಿಕೆಯ ಜ್ಞಾನ ನಮಗಿಂದು ಬೇಕು .
ಒಬ್ಬಳು  ಸ್ತ್ರೀ ಸ್ವತಃ ತನ್ನ ಗಂಡನೊಂದಿಗೆ ಹೊರಗಡೆ ಹೋಗಿ ಅರಾಮವಾಗಿ ತಿರುಗಾಡಿಕೊಂಡು ಬರುವ ವಾತಾವರಣ ಅವಾಗಿನ ಕಾಲದಲ್ಲಿ ಸ್ತ್ರೀಯರಿಗೆ ಇದ್ದದ್ದು ಅಪರೂಪ .
ಇವತ್ತಿನ ಯುಗದಲ್ಲಿಯೂ ಕೆಲವೊಂದು ವಿಷಯಗಳಲ್ಲಿ ,ಕೆಲವೊಂದು ಸಮಯದಲ್ಲಿ ನಮ್ಮ ನಾರಿಯರು ಕೆಲವೊಂದು ಸಂಪ್ರದಾಯವನ್ನು ಮುರಿದಿಲ್ಲ .
ಎಲ್ಲಿ ನಾರಿಯರಿಗೆ ಪೂಜ್ಯನೀಯ ಸ್ಥಾನ ಇದೆಯೋ ಅಲ್ಲಿ ದೇವಾನುದೇವತೆಗಳು ವಾಸವಾಗಿರುತ್ತಾರೆ ಎನ್ನುವುದು ಎಷ್ಟು ಸತ್ಯವೋ! ಅಷ್ಟೇ ಸತ್ಯವಾದದ್ದು ,ಯಾವ ಮನೆಗಳಲ್ಲಿ ದೇವರು ನೆಲೆಸಿರುತ್ತಾರೋ !ಅಲ್ಲಿ ಹೆಣ್ಣು ಮಕ್ಕಳು ಹುಟ್ಟುತ್ತಾರೆ ಎನ್ನುವುದು .ಇಂಥಹ ದೈವಿ ಸಂಭೂತ ಆದ ಹೆಣ್ಣು ಮಕ್ಕಳು. ನಾವು ಎಷ್ಟನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಗುತ್ತಿದ್ದೇವೆ, ಎಂಬುವುದು ನಮ್ಮನ್ನು ನಾವೇ ಪ್ರಶ್ನಿಸಿಕೊಂಡು ಸಾಗುವ ವಿಚಾರ.
ಶ್ರೇಷ್ಠ ಶರಣೆ

 ಅಕ್ಕಮಹಾದೇವಿಯವರು ನಮಗೆ ಆದರ್ಶರಾಗಿ ನಿಲ್ಲುವರು .
ಒಲ್ಲದ ಗಂಡನಾದ ಕೌಶಿಕ ರಾಜನನ್ನು ದಿಟ್ಟವಾಗಿ ವಿರೋಧಿಸಿ ನಡೆದ ಹೆಣ್ಣು ಮಗಳು ಶರಣೆ, ಮಾತೃಮಯಿ ತಾಯಿ ಅಕ್ಕನವರು .
ಅವರ ಅನುಭಾವದ ಅಡುಗೆಯ ಜ್ಞಾನ ದಾಸೋಹ ನಮಗಿಂದು ಪೂರಕ ಮತ್ತು ಅವಶ್ಯಕ.
ತನ್ನ ಜ್ಞಾನದ ಅರಿವಿನ ಗಂಡನಾದ ಚೆನ್ನಮಲ್ಲಿಕಾರ್ಜುನನನ್ನು ಹುಡುಕುವ, ಕೂಗಿ ಕರೆಯುವ ಮಾರ್ಧನಿ .

 ಹಗಲು ನಾಲ್ಕು ಜಾವಗಳು ನಿಮ್ಮ ಕಳವಳದಲ್ಲಿಪ್ಪೆನು
 ಇರುಳು ನಾಲ್ಕು ಜಾವ ವಿಕಳಾಸವಸ್ಥೆಯಲ್ಲಿಪ್ಪೆನು
 ಹಗಲಿರುಳು ನಿಮ್ಮ ಹಂಬಲದಲ್ಲಿ ಮೈಮರೆದೊರಗಿದೆನು
 ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಒಲುಮೆ ನಟ್ಟು

ಅಕ್ಕನವರ ಈ ವಚನದ ಭಾವ ನಮಗೆ  ಅತ್ಯಂತ ಸರಳ ಎನಿಸಿದರೂ ,
ಅಕ್ಕನವರ ಮೃದು ಭಾವ ಧೋರಣೆಯು ತುಂಬಾa ದೊಡ್ಡದು. ಆಗಸದಷ್ಟೇ ವಿಶಾಲವಾದುದಾಗಿದೆ.
ಕಳೆಯುವ ದಿನಗಳು ಒಂದೊಂದು ಯುಗವಾಗಿ ಬಿಟ್ಟಿವೆ ಅಕ್ಕನವರಿಗೆ

ಹೇ ಚೆನ್ನಮಲ್ಲಿಕಾರ್ಜುನಾ ನಾನು ನಿನ್ನದೇ ನೆನಪಿನಲ್ಲಿ ಹಗಲಿನ ನಾಲ್ಕು ಜಾವಗಳನ್ನು ನಿನ್ನ ನೆನಪಿನಲ್ಲಿಯೇ ಕಳವಳಿಸಿ ಕಳೆದಿರುವೆ .

ಇರುಳಿನಲ್ಲಿಯೂ ಶಿವನ ಪೂಜೆಯಲ್ಲಿಯೇ ಧ್ಯಾನಸ್ಥಳಾಗಿರುವೆ ಚೆನ್ನಮಲ್ಲಿಕಾರ್ಜುನಾ .

ಈ ಹಗಲು ಇರುಳು ಎನ್ನುವುದರ ಪರಿಯೇ ಎನಗಿಲ್ಲದೇ ಮೈಮರೆತು
ಬೆಂದಿರುವೆ ಚೆನ್ನಮಲ್ಲಿಕಾರ್ಜುನಾ .

ನಿಮ್ಮ ಒಲುಮೆಯ ಪ್ರೀತಿಯ ಭಾವ ನನ್ನ ಹಸಿವನ್ನೇ ಹಿಂಗಿಸಿ ಬಿಟ್ಟಿದೆ .ಕುಡಿಯುವ ನೀರಿನ ದಾಹವು ಎನಗಿಲ್ಲ, ನಿದ್ರೆಯಲ್ಲಿ ಮೈಮರೆತು ಸುಖಿಸುವ ಮನವು ಎನಗಿಲ್ಲದಂತೆ ಆಗಿದೆ .
ಎನ್ನುವ ಅಕ್ಕನವರ ಅರಿವಿನ ಭಾವದ ಗಂಡನನ್ನು ಪುನಃ ಪುನಃ ನೆನಪಿಸಿಕೊಂಡು ಮೈ ಮರೆತು, ಅಕ್ಕನವರ ಮಾರ್ಧನಿಯು ನಮ್ಮ ಕರ್ಣವನ್ನು ಹಾಗೂ ಕರುಳನ್ನು ಹಿಸುಕಿದ ಭಾವ ನಮಗಿಲ್ಲಿ ಕಂಡು ಬರುತ್ತಿದೆ .
ಒಟ್ಟಿನಲ್ಲಿ ದಿಟ್ಟ ನಿಲುವಿನ ಅಕ್ಕನವರ ಅರಿವಿನ ಗಂಡ ಚೆನ್ನಮಲ್ಲಿಕಾರ್ಜುನನ ನೆನಪಿನಲ್ಲಿಯೇ ದಿನ ನೂಕುವ ಅಕ್ಕನವರ ಮನವಿಲ್ಲಿ ನಮಗೆ ಎದ್ದು ಕಾಣುತ್ತಿದೆ .


Leave a Reply

Back To Top