ʼಸ್ವಾಸ್ಥ್ಯ ಸಮಾಜ ನಿರ್ಮಾಣ‌ʼ ಲೇಖನ-ಶಾರದಜೈರಾಂ.ಬಿ

ವಿಶೇಷ ಸಂಗಾತಿ

ʼಸ್ವಾಸ್ಥ್ಯ ಸಮಾಜ ನಿರ್ಮಾಣ‌ʼ ಲೇಖನ-

ಶಾರದಜೈರಾಂ.ಬಿ

ವೈಚಾರಿಕತೆ ಎನ್ನುವುದು ವಿಚಾರವಾದಿಗಳ ಮತ್ತು ಅನುಭವಿಗಳ ನಡುವೆ ಆಗಾಗ ನಡೆಯುತ್ತಲೇ ಇರುವ ವಿಚಾರ ಮಂಥನ,ವಾದ,ವಿವಾದವಾಗಿದೆ.
ವೈಚಾರಿಕತೆ ಮೊದಲು ಆರಂಭವಾಗಿದ್ದು ಯುರೋಪ್ ರಾಷ್ಟ್ರಗಳಲ್ಲಿ . ಹಾಗೇಯೇ ವೈಚಾರಿಕತೆ ಎಂದಾಕ್ಷಣ ನಾಸ್ತಿಕ, ಆಸ್ತಿಕ,ದೇವರ ಅಸ್ತಿತ್ವದ ಬಗೆಗಿನ ಚರ್ಚೆಗಳು ಮುನ್ನೆಲೆಗೆ ಬರುವವು.
ಆಸ್ತಿಕ, ನಾಸ್ತಿಕ ಎಂಬ ಪ್ರಶ್ನೆಗಿಂತ ದೇವರ ಹೆಸರೇಳಿಕೊಂಡು ಮಾಡುವ ಅಮಾನವೀಯ ಕೃತ್ಯಗಳ ಬಗೆಗೆ ತೀವ್ರ ಸ್ವರೂಪದ ಖಂಡನೆ ವ್ಯಕ್ತವಾಗುತ್ತದೆ.ಅರ್ಥವಿರದ ಆಚರಣೆಗಳು ಪ್ರಸ್ತುತವೇ?ದೇವರ ಬಗೆಗಿನ ಕುರಿತ ಸಮಸ್ಯೆಗಳನ್ನು ನಾನು ವೈಚಾರಿಕ ದೃಷ್ಟಿಯಿಂದ ಪರಿಶೀಲಿಸಲು ಹೊರಟಿದ್ದೇನೆಯೇ ಹೊರತು ಹೀಯಾಳಿಸುವ ಉದ್ದೇಶದಿಂದಲ್ಲ ಪೂಜಾ ವಿಧಾನದ ಕಲಾತ್ಮಕ ಸೌಂದರ್ಯಕ್ಕೂ, ನಮ್ಮ ಮಂತ್ರಗಳ ಮಾಧುರ್ಯಕ್ಕೂ ನಾನು ಮಾರು ಹೋಗಿದ್ದೇನೆ ಎಂದು
ದೇವರು ಕೃತಿಯಲ್ಲಿ ಎಂ ಎನ್ ಮೂರ್ತಿರಾವ್ ಅವರು ದಾಖಲಿಸಿದ್ದಾರೆ.
ಇನ್ನೂ ಶಿವರಾಮ ಕಾರಂತರು ನೇರ ನಿಷ್ಠುರತೆಗೆ ಹೆಸರಾದವರು ನಾನು ದೇವರನ್ನು ನಂಬುವುದಿಲ್ಲ, ಏಕೆಂದರೆ ನಾನು ನೋಡಿಲ್ಲ ನನಗೆ ಯಾವುದು ಗೊತ್ತಿಲ್ಲವೋ ಅದನ್ನು ನಾನು ನಂಬುವುದಿಲ್ಲ, ರಾಮಕೃಷ್ಣ ಪರಮಹಂಸರು ನಂಬಿದ್ದರು ತಪಸ್ಸಿನಿಂದ ಕಂಡುಕೊಂಡಿದ್ದರು.ನನಗೆ ರಾಮ ಎಂದರೆ ರಾಜಾ ರವಿವರ್ಮ ಅವರ ಚಿತ್ರ, ಕೃಷ್ಣ ಎಂದರೆ ಗುಬ್ಬಿ ವೀರಣ್ಣನವರ ಕೃಷ್ಣ ಲೀಲೆ ನೆನಪಿಗೆ ಬರುತ್ತದೆ, ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದು ಆಗುತ್ತದೆ ಎಂದು ನಂಬಿದ್ದೇನೆ ಎನ್ನುತ್ತಿದ್ದರು.
ಬುದ್ದ ಬಸವ ಅಂಬೇಡ್ಕರ್ ಪೆರಿಯಾರ್, ಲೋಹಿಯಾ ,ಎಚ್.ನರಸಿಂಹಯ್ಯ, ಕುವೆಂಪು ಎಲ್ಲರೂ ಜಗತ್ತಿಗೆ ಹೇಳ ಹೊರಟಿದ್ದೆ ಸಮಷ್ಟಿಯ ಬದುಕು ನಮ್ಮದಾಗಬೇಕೆಂದು, ಮನುಷ್ಯ ಮನುಷ್ಯನಿಗೆ ಸಮಾನನಲ್ಲವೇ ಭುವಿಯಲ್ಲಿ ಎಂದರು.ದಯೆ ಧರ್ಮದ ತಳಹದಿ,ಮೇಲು ಕೀಳು ಎಂಬ ತಾರತಮ್ಯಗಳಿರದ ಒಂದೇ ಎಂಬ ಐಕ್ಯ ಮಂಟಪ ಅನುಭವ ಮಂಟಪ ಎಲ್ಲಾ ಸ್ತರದವರು ಪಾಲ್ಗೊಳ್ಳುವಂತಾಯಿತು.
ಹಸಿದವನಿಗೆ ಅನ್ನ ನೀಡದೇ ದೇವರಿಗೆ ನೈವೇದ್ಯ ಎಂದು ಆರ್ಪಿಸಿದರೆ ಏನು ಫಲ,ಮಂತ್ರ, ಅಭಿಷೇಕ, ಪೂಜೆ ಎಂದು ಮಾಡುತ ಭಕ್ತಿ ಪ್ರಧಾನವಾಗಿರದೇ ಆಡಂಬರತೆಗೆ ಸಾಕ್ಷಿ ಆಗುತ್ತಿವೆ ಇಂದಿನ ದಿನಗಳಲ್ಲಿ.
ಭಕ್ತಿಗಿಂತ ಸೆಲ್ಪಿ ಕ್ಲಿಕ್ಕಿಸಿ ನೋಡಿ ನಲಿವ ಗುಂಗು ಕಾಣುತ್ತಿದ್ದೇವೆ.
ದೇವರು ಎಂದರೆ ಬೆಳಕು ಸೂರ್ಯ ಚಂದ್ರರ ಹಗಲು ರಾತ್ರಿಗಳೆಂಬ ಬೆರಗುಗಳಿಲ್ಲವೇ, ಜ್ಞಾನ ಎಂದರೂ ಬೆಳಕೆ, ಜ್ಞಾನದ ಶುದ್ಧ ಕನ್ನಡ ಪದ ಕಾಣ್ಕೆ,ಒಳಗಣ್ಣಿನಿಂದ ನೋಡುವಂಥಾದ್ದು.ಆಗುವುದಾದರೆ ದೇವರೇ ಆಗು ಎಂದಿಲ್ಲವೇ ಕುವೆಂಪು ಅವರು ಅಲ್ಲ ಇಲ್ಲಿ ಹುಡುಕುವುದ ಬಿಟ್ಟು ತನ್ನಲ್ಲಿಯೇ ಇರುವ ಸದ್ಗುಣಗಳ ಕಂಡರೆ ಆದೇ ದೈವತ್ವವಲ್ಲವೇ.
ನಮ್ಮ ಪೂರ್ವಿಕರು ಪ್ರಕೃತಿಯನ್ನು ದೇವರೆಂದು ಪೂಜಿಸುವ ಮೂಲಕ ನಮ್ಮ ಉಳಿವಿಗೆ ಪ್ರಕೃತಿ ಇದ್ದರೆ ಅಷ್ಟೇ ನಿರ್ನಾಮ ಮಾಡುವ ಬದಲು ಪೋಷಿಸಲು ಜಾಗೃತರಾಗಬೇಕು,ಹೀಗೇನೇ ಸಾಗಿದರೆ ಅಳಿವಿನಂಚಿಗೆ ಸಾಗುವೆವು.
ಮಹಾತ್ಮ ಗಾಂಧೀಜಿ ನುಡಿಯಂತೆ ಈ ಪ್ರಕೃತಿ ನಮ್ಮ ಆಸೆಗಳನ್ನು ಪೂರೈಸಲಷ್ಟೆ ಶಕ್ತ ದುರಾಸೆಗಳನ್ನಲ್ಲ.
ಕೊನೆಯದಾಗಿ ಹೇಳುವುದಾದರೆ ಅಂಬೇಡ್ಕರ್ ಅವರು ಸಮಾನತೆ ಇರದ ಶೋಷಣೆ, ಮೌಢ್ಯತೆಯಿಂದ ಕೂಡಿದ್ದ ಧಮ೯ ಕಂಡು ಅನುಭವಿಸಿ ಆ ಅಸಮಾನತೆಗಳಿರದ ಬೌದ್ಧ ಧರ್ಮ ಸ್ವೀಕರಿಸಲು ಕಾರಣವಾಗಿದ್ದು.ಅದೇ ನೆಲ ಜಲ,ಅದೇ ಬೆಳಕು ಇಲ್ಲಿ ಪ್ರಕೃತಿಯು ಭೇದವೆಣಿಸದೇ ಎಲ್ಲರಿಗೂ ಒಂದೇ ತೆರನಾಗಿ ನೀಡುವಾಗ ಪ್ರಾಣಿಗಳಲ್ಲೇ ಬುದ್ದಿವಂತ ಎಂದು ಕರೆಸಿಕೊಳ್ಳುವ ಮಾನವ ಭೇದವ ಮಾಡಿ ಪ್ರಾಣಿಗಳಿಗಿಂತ ಕೀಳು ಎಂಬಂತೆ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ.ನೀನ್ಯಾರಿಗಾದೇಯೋ ಮಾನವ ಎಂದಿರುವುದು ತಿಳಿಯದ ಮೂಡನಾಗಿದ್ದಾನೆ.
ಇಲ್ಲಿ ತೆಗೆದುಕೊಂಡು ಹೋಗುವುದೇನಿಲ್ಲಾ ಕಾಲನ ಕರೆ ಬಂದಾಗ ಬಿಟ್ಟು ಹೊರಡಬೇಕು ನಾನೆಂಬುದು ಮರೆತು ಎಲ್ಲರ ಅರಿತು,ಸವ೯ರೊಂದಿಗೆ ಬೆರೆತು ನಡೆದರೆ ಅದುವೇ ಸಾರ್ಥಕಜೀವನ.
ಭುವಿಯಲ್ಲಿ ನೀ ಬಿಟ್ಟು ಹೋದ ಸದ್ವಿಚಾರ, ಸಮಾಜಮುಖಿ ಚಿಂತನೆಗಳೇ ಚಿರಂತನವಾಗಿ ನೆನೆಯುವಂತಹವು
ಸಮಾಜಕ್ಕೆ ಕೆಡುಕುವುಂಟಾಗದ, ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ವೈಚಾರಿಕತೆ ನೆಲೆಗಟ್ಟು ಅತ್ಯಾವಶ್ಯಕವಾಗಿದೆ.

——————————————-

ಶಾರದ ಜೈರಾಂ.ಬಿ

One thought on “ʼಸ್ವಾಸ್ಥ್ಯ ಸಮಾಜ ನಿರ್ಮಾಣ‌ʼ ಲೇಖನ-ಶಾರದಜೈರಾಂ.ಬಿ

Leave a Reply

Back To Top