ಕಾವ್ಯ ಸಂಗಾತಿ
ಹನಿ ಬಿಂದು
ಬರಲಿ ಬರಲಿ
ಹಳತು ವರುಷ ಇಂದಿಗೆ ಮುಗಿಯಿತು
ಹೊಸ ವರ್ಷವು ಬರಲು ಅಡಿಯಿಟ್ಟಿತು
ಮರೆಯಲು ಸಾಧ್ಯವೇ ಇಪ್ಪತ್ನಾಲ್ಕನು?
ವರ್ಲ್ಡ್ ಕಪ್ ಎರಡನೇ ಬಾರಿಗೆ ತಂದಿದ್ದನು!
ಬರಲಿ ಆಂಗ್ಲ ಕ್ಯಾಲೆಂಡರ್ ನ ನ್ಯೂ ಇಯರ್
ತರುತಲಿ ಹೊಸ ಹೊಸ ಸ್ಟೈಲಿ ನಜರ್!
ನಾವು ನೀವು ಎಲ್ಲರೂ ಒಂದೇ
ಖುಷಿ, ನೆಮ್ಮದಿಗಾಗಿ ಬರುವೆವು ಮುಂದೆ!
ಬದುಕಿದು ಸಣ್ಣದು ನಗುವಲಿ ಕಳೆಯುತ
ಬದುಕುವ ಕ್ಷಣಗಳ ಆರಾಮದಿ ಮೆಲ್ಲುತ
ಜಾತಿ ಮತಗಳ ಬೇಧ ಭಾವವ ತೊರೆಯುತ
ಮಾನವತೆಯ ಸಂದೇಶ ಸಾರುತ
ಹೊಸ ದಿನ ಹೊಸ್ ಕ್ಷಣ ಬಾಳಲಿ ಇರಲಿ
ಜೊತೆಗೆ ಆರೋಗ್ಯ ಆಯಸ್ಸು ತರಲಿ
ಯಾರ ಹೃದಯಗಳೂ ಒಡೆಯದೆ ಬಡಿಯಲಿ
ಕಣ್ಣೀರ ಮನದಲಿ ತರಿಸದೆ ಹೋಗಲಿ
ಹನಿಬಿಂದು
Super mam
Savita Deshmukh
ಚೆನ್ನಾಗಿದೆ ಮೆಡಮ್
…..ಶುಭಲಕ್ಷ್ಮಿ