ಕಾವ್ಯ ಸಂಗಾತಿ
ವಿಶಾಲಾ ಆರಾಧ್ಯ
ಗಜಲ್
ಹೊಸ ಕವಿತೆಗೆ ನೆಪವಾಗಿ ಹೊಸ ಚೇತಕೆ ಬಲವಾಗಿ
ಹೊಸ ಕಾರಣ ನೀನಾಗಿ ಬಾ ಒಲವೇ ಬಾ
ಸರಿಸಿ ಎಲ್ಲ ದುಗುಡಗಳ ಮರೆಸಿ ಎಲ್ಲ ನೋವುಗಳ
ಹೊಸ ಸ್ಪೂರ್ತಿಯ ಗೆಲುವಾಗಿ ಬಾ ಒಲವೇ ಬಾ
ಕಳೆಗಳೆಲ್ಲಾ ಬಿಸುಟಿ ದೂರ ಮಳೆಯಾಗಲಿ ಮನಕೆ
ಹೊಸ ಪಲ್ಲವದ ಬೆಳೆಗೆ ಬೆಳಗಾಗಿ ಬಾ ಒಲವೇ ಬಾ
ಬರವೆಲ್ಲ ಕಳೆದುಹೋಗಿ ಒಣ ಮರಗಳೆಲ್ಲ ಚಿಗುರೆ
ಹೊಸ ವರ್ಷವ ಸುರಿಸಿ ನೀ ಬಾ ಒಲವೇ ಬಾ
ಆನು ನೀನು ಭೇದ ಕಳೆದು ನೀ. ನಾ. ನಾನು ನೀನೇ
ಆಗುವಲ್ಲಿ ಆಶೆಯ ಕಿರಣವಾಗಿ ಬಾ ಒಲವೇ ಬಾ
ಹೊಸ ಬೆಳಗಿನ ಹೊಸ ಇರುಳಲಿ ಸಿಹಿಗನಸಿನ
ವಿಶಿಯ ಮನಕೆ ತೊಟ್ಟಿಲಾಗಿ ನೀ ಬಾ ಒಲವೇ ಬಾ
ವಿಶಾಲಾ ಆರಾಧ್ಯ
ಇದು ಗಝಲ್ ನಿಯಮ ಪಾಲನೆ ಆಗಿಲ್ಲ ಇದು ಗಝಲ್ ಅಲ್ಲದೆ…ಕವಿತೆ ಅಂತ ಹೇಳಬಹುದು
ಇದು ಗಝಲ್ ಅಲ್ಲ
Sripad Algudkar ✍️