ಪರಿಮಳ ಐವರ್ನಾಡು ಸುಳ್ಯ ಅವರ ಲೇಖನ-ಹಳೆಯ ನೆನಪು- ಹೊಸ ಹುರುಪು – ನವಸಂಕಲ್ಪ

ಕಲೆಗಳಲಂಕರಣ: ಇನ್ನೇನು ಬಂದೇಬಿಟ್ಟಿತ್ತು 2025ರ ನವವಸಂತ, ಹೊಸ ವರ್ಷ, ನಿನ್ನೆ ತಾನೆ ಹುಟ್ಟಿದ ಹಸುಳೆಯಂತೆ ಅಂಬೆಗಾಲಿಟ್ಟು ತೆವಳುತ್ತಾ,ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಬಾಲ್ಯಾವಸ್ಥೆಯನ್ನು ಕಳೆದು ಪ್ರೌಢಾವಸ್ಥೆಗೆ ಕಾಲಿಟ್ಟು ನಂತರ ನವ ತರುಣಿಯಂತೆ ನವ ನವ ಕನಸುಗಳೊಂದಿಗೆ ದಿನ ಕಳೆಯುತ್ತಾ ಒಂದಷ್ಟು ದಿನಗಳಲ್ಲೇ ಜೀವನದ ಕೊನೆ ಘಟ್ಟಕ್ಕೆ ಬಂದು ತಲುಪಿದೆ  2024ನೇ ವರ್ಷ. ಇದೀಗ ಎಲ್ಲರೂ 20024ನೇ ವರ್ಷಕ್ಕೆ ವಿದಾಯ ಹೇಳುತ್ತಾ 2025ನೇ ವರ್ಷವನ್ನು ಬಹಳ ಉತ್ಸಾಹದಿಂದ ಆಹ್ವಾನಿಸುತಿದ್ದೇವೆ ಈ ಒಂದು ವರ್ಷದಲ್ಲಿ ಪ್ರತಿಯೊಬ್ಬರ ಜೀವನದಲ್ಲಿಯೂ  ಸುಖ, ಸಂತೋಷ, ದುಃಖ ಮರೆಯಲಾಗದ ಘಟನೆ ಹೀಗೆ ಎಷ್ಟೋ ಅನುಭವಗಳನ್ನು ಪಡೆದಿರಬಹುದು. ಪ್ರತಿಯೊಂದು ಅನುಭವಗಳು ಸಹ ಎಲ್ಲರ ಪಾಲಿಗೆ ಒಂದೊಂದು ಪಾಠವಾಗಿ ಪರಿಣಮಿಸಿರುತ್ತದೆ ಕಹಿ ಘಟನೆಯನ್ನು ಮರೆತು ಸಿಹಿ ನೆನಪಿನೊಂದಿಗೆ ಹೊಸ ವರ್ಷವನ್ನು ಆಹ್ವಾನಿಸೋಣ ಎಂದು ಭಾವಿಸಿದರೆ ಅದು ತಪ್ಪಲ್ಲ, ಆದರೆ ಕಹಿ ಘಟನೆಯೊಂದಿಗೆ ಕಲಿತ ಪಾಠಗಳೂ ಕೂಡ ನಮ್ಮ ಜೀವನದಲ್ಲಿ ಅತ್ಯುತ್ತಮ ಮಾರ್ಪಾಡನ್ನು ತರುತ್ತದೆ. ವೈಯುಕ್ತಿಕ ಅಭಿವೃದ್ಧಿಗೂ ಕೂಡ ಕಾರಣವಾಗುತ್ತದೆ ಆದುದರಿಂದ ಕಹಿಯನ್ನು ಸಿಹಿಯಾಗಿಸಿ ನವ ವಸಂತವನ್ನು ನಾವು ಸಂಭ್ರಮದಿಂದ ಆಹ್ವಾನಿಸಿ ನವ ನವೀನ ಕೌಶಲ್ಯ ದೊಂದಿಗೆ ನವ ಜೀವನವನ್ನು ಆರಂಭಿಸೋಣ ಕೆಲವೊಂದು  ಹಳೆಯ ನೆನಪುಗಳು ಸಂತೋಷವನ್ನು ಕೆಲವೊಂದು ಹಳೆಯ ನೆನಪುಗಳು ದುಃಖವನ್ನು ನೀಡುತ್ತದೆ ಋಣಾತ್ಮಕ ಅಂಶಗಳನ್ನು ಧನಾತ್ಮಕವಾಗಿ ಚಿಂತಿಸಿ ಜೀವನವನ್ನು ರೂಪಿಸಿಕೊಳ್ಳಬೇಕು. ಅದರಂತೆ ಹಳೆಯ ನೆನಪುಗಳಿಗೆ ಹೊಸ ಹುರುಪನ್ನು ತುಂಬಿ ಹೊಸ ವರ್ಷದಲ್ಲಿ ನವ ಸಂಕಲ್ಪ ಮಾಡಿ ಸಮಾಜಕ್ಕೆ ಒಳಿತನ್ನು ಮಾಡುತ್ತಾ ನಮಗೂ ಒಳಿತಾಗುವಂತೆ ಜೀವಿಸುವುದು ಸೂಕ್ತವೆನಿಸುತ್ತದೆ.

                   2025ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ  ನಾವು ಜೀವನದಲ್ಲಿ ಅನುಸರಿಸಬೇಕಾದ ಕೆಲವೊಂದು ಅಂಶಗಳ ಬಗ್ಗೆ  ಮನದಟ್ಟು ಮಾಡಿಕೊಳ್ಳಬೇಕಾಗುತ್ತದೆ
1) ಆರೋಗ್ಯದ ಕಡೆ ಗಮನಹರಿಸುವುದು
2) ದ್ವಿಚಕ್ರವಾಹನ ಚಲಾಯಿಸುವಾಗ ಖಡ್ಡಾಯವಾಗಿ ಹೆಲ್ಮೆಟ್ ಧರಿಸುವುದು – ಪೊಲೀಸರಿಗೆ ಹೆದರಿ ಅಲ್ಲ.ನಮ್ಮನ್ನು ನಂಬಿದ ಜೀವಗಳಿಗಾಗಿ
3) ತಮ್ಮ ಕೆಲಸದ ಒತ್ತಡದಲ್ಲಿ ಸಮಯದ ಅಭಾವವಿದ್ದರೂ ಸಹ ಒಂದಿಷ್ಟು ಸಮಯವನ್ನು ಕುಟುಂಬಕ್ಕಾಗಿ ಮೀಸಲಿಡುವುದು.
4) ಕಿರಿಯರನ್ನು ಪ್ರೀತಿಸುವುದು ಹಿರಿಯರಿಗೆ ಗೌರವ ನೀಡುವುದು
5) ನಮಗಾಗಿ ಜೀವ ಸವೆಸಿದ ಹಿರಿ ಜೀವಗಳಾದ ಹೆತ್ತವರನ್ನು ವೃದ್ಧಾಶ್ರಮಕ್ಕೆ  ಕಳುಹಿಸದೆ ಮಗುವಂತೆ ನೋಡಿಕೊಳ್ಳುವುದು
6)  ಮಕ್ಕಳ ಮೇಲೆ ಅಧಿಕ ಒತ್ತಡವನ್ನು ಹೇರದಿರುವುದು
7 ) ಹೊಸ ವರ್ಷ ಆಚರಣೆಯ ಹುಮ್ಮಸ್ಸಿನಲ್ಲಿ ಪರಿಸರವನ್ನು ಹಾಳು ಮಾಡದಿರುವುದು
8) ಭಾರತೀಯ ಸಂಸ್ಕೃತಿ ಹಾಗೂ ಭಾರತದ ಹೆಮ್ಮೆಯ ಪರಂಪರೆಯನ್ನು ಉಳಿಸಿಕೊಳ್ಳುವುದು
9) ದೇಶ ಕಾಯುವ ಸೈನಿಕರು ಹಾಗೂ ಅನ್ನ ನೀಡುವ ದೇವತೆಗಳಾದ ರೈತರನ್ನು ಸ್ಮರಿಸುವುದು
10) ಪ್ರಕೃತಿಯ ಮಡಿಲಲ್ಲಿ ಆಡಿ ಬೆಳೆಯಬೇಕಾದ ಮಕ್ಕಳ ಕೈಗೆ ಮೊಬೈಲನ್ನು ಕೊಟ್ಟು ಅವರ ಕೌಶಲ್ಯವನ್ನು ಅಲ್ಲೇ ನಶಿಸಿ ಹೋಗುವಂತೆ ಮಾಡದಿರುವುದು

               ಹೀಗೆ ಇನ್ನು ಅನೇಕ ಒಳ್ಳೆಯ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸುಕೊಳ್ಳುವುದರ ಮೂಲಕ ಹಾಗೂ ಪಾಲಿಸುವುದರ ಮೂಲಕ ಹೊಸ ವರ್ಷವನ್ನು ಗೌರವದಿಂದ ಪ್ರೀತಿಯಿಂದ ಆಹ್ವಾನಿಸೋಣ ಹಾಗೂ ಅರ್ಥಪೂರ್ಣ ಬದುಕನ್ನು ಸಾಗಿಸೋಣ.


Leave a Reply

Back To Top