ಕಾವ್ಯ ಸಂಗಾತಿ
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
ಶರಣು ಶರಣೆನ್ನಿ
ಉಕ್ಕಿ ಹರಿಯುತ್ತಿದ್ದಾಳೆ ಗಂಗೆ
ನಿಮ್ಮದೇ ಪಾಪ ಕೂಪಗಳ ಕಳೆಯಲೆಂದು
ಹಸಿದ ಹೊಟ್ಟೆಗೆ ಅನ್ನ ನೀಡದ
ನಿಮ್ಮ ಬೆಳೆಯ ಕೊಳೆಯ
ತೊಳೆಯಲೆಂದು
ಸಾಕುವ ನಾಯಿಗೆ ಮಾಡುವ
ನಿಮ್ಮ ಖರ್ಚು ಹೆತ್ತ ತಂದೆ ತಾಯಿಯರಿಗಿರಲೆಂದು
ತುಳಿದ ನಿಮ್ಮ ಪಾಪದ
ಪಾದದ ಕೊಳೆ ತೊಳೆದು ಬಿಡಲೆಂದು
ಮೂಕರೋಧನ ಅನಾಥ
ವೃದ್ಧ ಬಾಲ ಬಾಲೆಯರ
ಮೇಲೆ ನಿಮ್ಮ ಕರುಣೆ
ಪ್ರೀತಿಯಿರಲೆಂದು
ಮತಿಯಿಂದ ಮತಗೆಟ್ಟು
ಮತಿಭ್ರಮಣೆಯಲಿ
ಮೆರೆವ ನಿಮ್ಮ ಅಹಂಮಿಕೆಯನು
ತೊಲಗಿಸಲೆಂದು
ಎಚ್ಚೆತ್ತು ಕೋ ಓ ಮನುಜ
ದಿಕ್ಕು ತಪ್ಪಿ ಸಂಚರಿಸುವ
ಪ್ರವಾಹ ನಿಮ್ಮ ಮನೆಗೂ
ಬಂದಿತ್ತೂ ಎಚ್ಚರ
ಎಚ್ಚೆತ್ತು ಕೊಳ್ಳಿ ದೀನ ದುರ್ಬಲ
ಅನಾಥ ರಕ್ಷಕ ಆ ಭಗವಂತ ನ
ನಾಮಸ್ಮರಣೆ ಮಾಡಿ
ಕಳೆಯುವುದು ಪಾಪ
ನಡೆದಂತೆ ನುಡಿಧು ನುಡಿದಂತೆ ನಡೆದು ತೋರಿದ ಶರಣಕುಲಕ್ಕೆ
ಶರಣು ಶರಣೆನ್ನಿ ..
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ