ಕಾವ್ಯ ಸಂಗಾತಿ
ಬಾಗೇಪಲ್ಲಿ ಅವರ
ಗಜಲ್
( “ಬೇ ಷಕ್” ಪದವನು ರದೀಫ್ ಆಗಿ ಬೆಳಗಿಸಲು ಬರೆದ ಗಜಲ್, ಇತರೆ ತಾವುಗಳು ಹೇಳಿ)
ನೀನೊರ್ವ ವಿಶೇಷ ಕೋಮಲೆ ಬೇ ಷಕ್
ಕಾಣುವೆ ನೀ ಪೂರ್ಣ ನಿರ್ಮಲೆ ಬೇ ಷಕ್
ಅಳತೆಗೆ ತಕ್ಕ ಮೈಕಟ್ಟಿಹುದು ಅರಿವಿಗಿದೆಯೇ
ಋಷಿಯನೇ ಸಮ್ಮೋಹನ ಗೊಳಿಸುವೆ ಬೇ ಷಕ್
ಲೇಪಾಕ್ಷಿಯಲಿಹ ಪರಿಪೂರ್ಣ ಹೆಣ್ಣು ಶಿಲ್ಪ ನೀ
ಶತ ಪ್ರತಿಶತ ಅದನೇ ಹೋಲುವೆ ಬೇ ಷಕ್
ಪ್ರಕಟವಾಗಿದೆ ಮನದ ಬಯಕೆ ಭಂಗಿಯಿಂದ
ನಿನ್ನದು ಸಂಗ ಬಯಸಿಹ ಕಾಯವೆ ಬೇ ಷಕ್
ಕೃಷ್ಣಾ! ಹೆಣ್ಣ ಒಲೈಪುದು ನಿನಗೆ ಕರಗತ ವಿದ್ಯೆದೇವ
ಚೂರು ಭಕ್ತಿಸಾಕು ಅವನ ಪಡೆಯುವೆ ಬೇ ಷಕ್
ಬಾಗೇಪಲ್ಲಿ