ಗಾಯತ್ರಿ ಎಸ್ ಕೆ ಅವರ ಕವಿತೆ-ಹಿಂದೆ ಸರಿದೆ

ಮನದ ಮಾತು ಬೇಕಾಗಲಿಲ್ಲ
ನಿನಗೆ
ಅರಿತ ಹೃದಯ ಬೆಸೆಯಲಿಲ್ಲ
ಮನಕೆ

ಮುದ ತರುವ ಮಾತುಗಳು
ಇರಲಿಲ್ಲ
ಭಾವನೆಗಳಿಗೆ ಬೆಂಬಲವಿಲ್ಲ
ಕೊನೆಗೆ

ಮೊದಮೊದಲು ಅಭಿಮಾನ
ಪಡುತ್ತಿದ್ದೆ
ಬಿಗುಮಾನ ತೋರದೆ
ಮಾತಾಡುತಿದ್ದೆ

ಕಾಯುತ್ತಿದ್ದೆ ಕನವರಿಸುತ್ತಿದ್ದೆ
ಅರಿಯಲಿಲ್ಲ
ಕಲ್ಲಿನಂತ ಮನಸ್ಸು ನಿನ್ನದು
ಹಿಂದೆ ಸರಿದೆ

ಹೇಳುವುದು ಏನಿಲ್ಲ ಮನದಲ್ಲಿ
ಮಾತಿಲ್ಲ
ಸುಲಭದ ಪ್ರೀತಿಯಲ್ಲ ನಿರಂತರ
ಇರುವುದು


Leave a Reply

Back To Top