ಸುಧಾ ಹಡಿನಬಾಳ ಕವಿತೆ-ಬಾವೀಲಿರುವ ಕಪ್ಪೆ ಹಂಗೆ

ಕೊಚ್ಚೆಯಲಿ ಕಲ್ಲೆಸೆದು
ಮೈಗೆ ಸಿಡಿಸಿಕೊಂಬವರ ಪರಿ
ನೋಡಿದರೆ ಇಂತವರ
ಮೈಯೆಲ್ಲಾ ತಣ್ಣಗೆ ಉರಿ!

ತಾವೇನೂ ಮಾಡಲಾರರು
ಮಾಡುವವರ ಸಹಿಸಲಾರರು
ಇಂತವರು ಇರುವುದೇ ಹಿಂಗೆ
ಬಾವೀಲಿರುವ ಕಪ್ಪೆ ಹಂಗೆ!

ಹಳೆಯ ದ್ವೇಷವ ಬಿಡಲಾರರು
ಹೊಸತನಕ್ಕೆ ತೆರೆಯಲಾರರು
ಕತ್ತೆಗಾದಂತೆ ಆದ್ರೂ ಸರ್ವೀಸು
ಮೈ ಮನವೆಲ್ಲ ಹಾಲಾಹಲ ಹೊಲಸು!

ಎಲ್ಲದಕೂ ಸಿನಿಕತನ
ಕೊಂಕು ಮಾತು ಡೊಂಕು ಬಾಲ
ಪೈಸೆ ಪೈಸೆ ಲೆಕ್ಕ ಹಾಕಿ
ಕೂಡಿ ಕಳೆವ ಜಿಪುಣತನ

ಮಾತು ಮಾತಿಗೂ ಅಸಹನೆ
ಬುಸುಗುಡುವ ದುರಹಂಕಾರ
ವಯಸ್ಸಿಗೂ ಬುದ್ಧಿಗೂ
ತಾಳೆಯಾಗದ ಲೆಕ್ಕಾಚಾರ!…


sudhahadinavala

6 thoughts on “ಸುಧಾ ಹಡಿನಬಾಳ ಕವಿತೆ-ಬಾವೀಲಿರುವ ಕಪ್ಪೆ ಹಂಗೆ

  1. ಕಹಿ ಸತ್ಯವನ್ನ
    ಚಂದವಾಗಿ ಹೇಳಿದಿರಿ
    ಧನ್ಯವಾದಗಳು ಮೇಡಂ.

Leave a Reply

Back To Top