ಕಾವ್ಯ ಸಂಗಾತಿ
ಅಂಜಲಿದೇವಿ ಹಾವೇರಿ
‘ಕಾಡು ಮಲ್ಲಿಗೆ..’
ಕಾಡು ಮಲ್ಲಿಗೆ..
.ಕಾಡುವ ಮಲ್ಲಿಗೆ…
ನಿನ್ನ ಪರಿಮಳವ
ಹುಡುಕ ಹೊರಟ ನಾನು
ಸೋತು ಹೋದೆನು… ನಿನ್ನ
ಕಂಡು ಕನವರಿಸುತಿಹೆನು….
ನಿನ್ನ ಮಟ್ಟಲದುವೆ ಬಾಡುವ
ಸೂಕ್ಷ್ಮತೆಗೆ ಬೆರಗಾದೆನು…..
ನಿನ್ನ ರಮ್ಯತೆಯ ಕಂಪಿಗೆ
ಮನಸೋಲದವರಿಲ್ಲ…
ಕಾಡಿನಲ್ಲಿ ಅರಳುವ ಸರಳ
ಸಜ್ಜನಿಕೆಯ ಜವ್ವನೆ ನೀನು…
ನಿನ್ನ ಅಮೃತದ
ಸವಿಯುಂಡವರೆಷ್ಟೊ…
ಕಂಡವರೆಷ್ಟೊ….
ನಿನ್ನ ಅರಸಿ ಹೊರಟವರಿಗೆ ಕೈ
ಬೀಸಿ ಕರೆಯುತ್ತಿದೆ..
ಆ ನಿನ್ನ ಕಂಪು….
ಆ ನಿನ್ನ ಕಂಪು….
ನಿನ್ನ ಸ್ನೇಹ ಪ್ರೀತಿ
ನನ್ನ ಸೋಂಪು
ಅಂಜಲಿದೇವಿ ಹಾವೇರಿ
Very Beautiful poem Madam
Wonderful lines madam
ಅದ್ಭುತ ಮೇಡಂ….
ಅದ್ಭುತ ಮೇಡಂ,