ಲಲಿತಾ ಕ್ಯಾಸನ್ನವರ ಅವರ ಕವಿತೆ-ಸಾಗುತಿರುವೆ….

ಹೆಜ್ಜೆ ಹೆಜ್ಜೆಗೂ ಬೆಳಕ ಹುಡುಕಾಟ
ಎತ್ತಲೂ ಸುತ್ತಲೂ ಇರುವ ಕರಿಗತ್ತಲು
ಕಲ್ಲು ಮುಳ್ಳುಗಳ ಮೇಲೆ ನಡೆಯುತ
ನೆಮ್ಮದಿಯರಸಿ ಹೊರಟಿರುವೆ ಬದುಕಿನಲಿ

ಮಳೆ ಬಿಸಿಲು ಗಾಳಿ ತೂರಿ ಬಂತು
ಗಂಟುಮೂಟೆ ಹೊತ್ತು ಸಾಗಿರುವೆ
ಹೆಗಲಭಾರ ಇಳಿಸಿ ಕೊಳ್ಳುವ ತವಕದಿ
ಮಣ ಭಾರವಾಗಿದೆ ತುತ್ತು ಅನ್ನಕ್ಕಾಗಿ

ನಾನು ನನ್ನ ಜೀವ ಜೀವನ ಸಾಕಾಗಿದೆ
ನನ್ನ ಬದುಕಿನ ಪುಟಗಳಲ್ಲಿ ಬಣ್ಣ ತುಂಬಿದ
ಕೂಸುಗಳಿಗಾಗಿ ಹೋಗುತಿರುವೆ
ಅವರ ಬದುಕು ಬಣ್ಣ ತುಂಬೀತೆಂದು

ಭರವಸೆ ಮುದುಡಬಾದೆಂದು
ಕರುಳಬಳ್ಳಿಗಳ ಹೊತ್ತು ಸಾಗಿರುವೆ
ಗುರಿ ಮುಟ್ಟುವ ತವಕ ಮನದಲಿರಿಸಿ
ದಾರಿ ಸಾಕು ಸಾಕು ಎನ್ನುವ ತನಕ…

———————————

3 thoughts on “ಲಲಿತಾ ಕ್ಯಾಸನ್ನವರ ಅವರ ಕವಿತೆ-ಸಾಗುತಿರುವೆ….

Leave a Reply

Back To Top