ಕನ್ನಡ ಸಂಗಾತಿ-2026
ಡಾ.ಗೀತಾ ದಾನಶೆಟ್ಟಿʻ
ಚೆಲುವ ಕನ್ನಡ ನಾಡು


ಚೆಲುವಿನ ಒಲವಿನ ಕನ್ನಡ ನಾಡು
ವೀರರಮಣೀಯರು ಬೆಳಗಿದ ಬೀಡು
ವನಸಿರಿಗಳಿಂದ ಕೂಡಿದ ನಾಡು
ಅಂದ ಚಂದದ ಗಂಧದ ಬೀಡು
ಪೊನ್ನ ಜನ್ನ ರನ್ನ ಉದಯಿಸಿದ ನಾಡು
ಕ್ರಾಂತಿ ಕಹಳೆ ಮೊಳಗಿಸಿದ ಬೀಡು
ವೀರ ಧೀರರಾಳಿದ ಹೆಮ್ಮಯ ನಾಡು
ಕನ್ನಡ ಕಸ್ತೂರಿ ಸೂಸುವ ಬೀಡು
ರಸಋಷಿಗಳು ನೆಲೆಸಿದ ನಾಡು
ಕಣ್ಮನ ಸೆಳೆಯುವ ಕಲೆಗಳ ಬೀಡು
ಶರಣ ಸಂಸಾರ ಕವಿಗಳ ನಾಡು
ಗಂಗೆ ತುಂಗೆ ಹರಿಯುವ ಬೀಡು
ಪ್ರೀತಿ ಸ್ನೇಹ ಜೀವಿಗಳ ನಾಡು
ಸಭ್ಯತೆ ಸ್ವಾಭಿಮಾನದ ಬೀಡು
ಸತ್ಯ ಸಮತೆ ಸಾರಿದ ನಾಡು
ಜಾತಿ ಮತಗಳ ಮೀರಿದ ಬೀಡು
ಜಗದಲಿ ಮೆರೆದಿದೆ ಕನ್ನಡ ನಾಡು
ಹಿರಿಮೆ ಗರಿಮೆಗಳ ಹೊನ್ನಿನ ಬೀಡು
ಶಾಂತಿ ಸೌಹಾರ್ದ ಸಂಸ್ಕೃತಿ ನಾಡು
ಕನ್ನಡಾಂಬೆಯ ಕರುಣೆಯ ಬೀಡು
ಕನ್ನಡ ತೇರನು ಎಳೆಯುವ ನಾಡು
ಕೀರ್ತಿ ಪತಾಕೆ ಹಾರಿಸಿದ ಬೀಡು
ಬಾನೆತ್ತರಕ್ಕೆ ಬಾವುಟ ಏರಿಸಿದ ನಾಡು
ಕನ್ನಡಮ್ಮನ ಉಸಿರಿನ ಬೀಡು
ಡಾ.ಗೀತಾ ದಾನಶೆಟ್ಟಿ



