ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ‘ಕಾಡುತ್ತಿವೆ’

ಮತ್ತೆ ಮತ್ತೆ
ಕಾಡುತ್ತಿವೆ
ನಿತ್ಯ ಹರಿವ
ಒತ್ತಿ ಬರುವ
ಒಲವ ಪ್ರೀತಿ
ಪ್ರೇಮ ಭಾವಗಳು

ಅಬ್ಬರಿಸುವ
ಅಲೆಗಳಿಗೆ
ಅಕ್ಷರ ರೂಪ
ಕೊಡುವೆ
ಅರಳಲಿ ಕವನ
ಎನ್ನೆದೆ ತೋಟದಲಿ

ನಿನ್ನ ಚೆಲುವಿಗೆ
ಸಗ್ಗ ಸೋತಿತು
ಹೃದಯ ವೀಣೆ ಮೀಟಿತು
ದಟ್ಟ ಕಾನನ
ಮೊರದ ಪೊದರಿನ
ಪುಟ್ಟ ಹಕ್ಕಿ ಹಾಡಿತು


8 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ‘ಕಾಡುತ್ತಿವೆ’

  1. ಹೃದಯ ವೀಣೆ ಮೀಟಿತು.
    ಸುಂದರ ಕವನ

    ಅಕ್ಕಮಹಾದೇವಿ

  2. ನಿನ್ನ ಚೆಲುವಿಗೆ
    ಸಗ್ಗ ಸೋತಿತು
    ಎಂಥ ಅಪೂರ್ವವಾದ ಕವಿಹೃದಯ

    ಸುಶಿ

  3. ಆರ್ಥ ಪೂರ್ಣ ಸುಂದರ ಕವನ ಸರ್

  4. ಸುಂದರ ಭಾವದ ವ್ಯಕ್ತಿ

  5. ಸುಂದರ ಭಾವದ ಅಭಿವ್ಯಕ್ತಿ

Leave a Reply

Back To Top