ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ಹೆಜ್ಜೆಯ ಸದ್ದು
ಮತ್ತದೇ.. ಸ್ವಗತ
ಮಗ್ಗುಲು ಬದಲಾಯಿಸುವ ಮುನ್ನವೇ ಎದ್ದು ಹೋಗಲು ಸಿದ್ದರಿರುವವರ ಬಳಿ ಬಯಸಬಹುದೇ ಪ್ರೀತಿ ಚುಂಬನದ ವಿದಾಯವ….
ಕಳಚಿಟ್ಟ ಬಟ್ಟೆಯಲಿ ಮಡಿಸಿಟ್ಟ ಕನಸುಗಳ ಮಡಿಕೆಗಳು ಸುಕ್ಕಾಗಿ ಹೋದವಲ್ಲ
ಹಸಿ ಹಸಿ ನೆನಪುಗಳ ಜೊತೆಗೆ ಬಿಸಿ ಬಿಸಿ ಹನಿಗಳು ಎರೆದ ಕೂದಲಿನದೋ? ಏದುಸಿರ ಬೆವರಿನದೋ? ಕಣ್ಣ ತುಂಬಿದ ಕಂಬನಿಯದೋ ಏನೆಂದು ಅರಿಯಲಾರದ ದ್ವಂದ್ವದಲಿ…
ಮೂಕವಾಯಿತು ಮನವು
ಶೋಕದಾಸರೆಗೆ ತನುವು
ಹೊರಗೊಂದು ಹೆಜ್ಜೆಯ ಸದ್ದು ಗೆಜ್ಜೆಯ ಕಟ್ಟಲು ಅಣಿಯಾಗಿತ್ತು
ಶೋಭಾ ಮಲ್ಲಿಕಾರ್ಜುನ್