ಇಮಾಮ್ ಮದ್ಗಾರ ಅವರ ಕವಿತೆ-ಸ್ವಲ್ಪ ತಡಿ

ನಾನು ಬದಲಾಗಿರಬಹುದು
ಆದರೆ..ನೀನಂದು ಕೊಂಡಂತಲ್ಲ

ನಾನು ಬದುಕಿರಬಹುದು
ಆದರೆ…ನಾನಂದು
ಕೊಂಡಂತಲ್ಲ

ನಾನು ನಿನ್ನೊಂದಿಗೆ ಮಾತು
ಬಿಟ್ಟಿರಬಹುದು ಆದರೆ….
ಕಣ್ಣು ????

ಗಾಳಿಮಾತಿಗೆ ನೀ ಕಿವಿಯನೇಕೇ ಹಿಗ್ಗಿಸುವೆ ?
ಕಣ್ಣೀಲ್ಲ ಪ್ರೀತಿಗೆ ಅನುಭವಿಕರಾ ಮಾತು

ಉಸಿರತಿತ್ತಿ ಉಸಿರಾಡುವದ
ಮರೆಯುವ ಮುನ್ನ
ಅಪ್ಪಿನೋಡೊಮ್ಮೆ.

ನನ್ನೆದೆಯ ಬೇಗುದಿಗಳೆಲ್ಲ-
ವನ್ನೂ ನಿನ್ನೆದೆಗೆ ಸಾಗಹಾಕಿ
ನಾ ನಿಟ್ಟುಸಿರ ಬಿಟ್ಟು ಬಿಡುವೆ ಕೊನೆಯದಾಗಿ

ಮಿದುಳಿನ ನರಗಳಿನ್ನೂ
ನಿನಗಿಂತ ಚುರುಕಾಗಿವೆ
ಹೃದಯ ??? ಅದನ್ನು
ನೀನೇ ಕೇಳಬೇಕು !

ಸ್ವಲ್ಪ ತಡಿ
ಹೆಜ್ಜೆಸಪ್ಪಳ !!

ಖಂಡಿತ ಅಮ್ಮನವೇ ಥೇಟು…
ನಿನ್ನ ಹೆಜ್ಜೆ ಸಪ್ಪಳದಂತೆ
ನಾಳೆ ಮಾತನಾಡುವೆ

ಉಸಿರಿದ್ದರೆ.


Leave a Reply

Back To Top