ಕಾವ್ಯ ಸಂಗಾತಿ
ಮರುಳಸಿದ್ದಪ್ಪ ದೊಡ್ಡಮನಿ
ಶಾಯಿರಿಗಳು
೧)
ನೀ ಹಂಗ್ಯಾಕ ನೋಡ್ತಿದಿ
ಕಣ್ಣಿಗೆ ಕರಗಿ ಹ್ವಾದೇನು
ಮನಸಿಟ್ಟು ನೋಡು ನಾ
ನಿನ್ನ ಹತ್ರಾರ ಬಂದೇನು
(೨)
ನಿನ್ನ ಒಂದು ಸಣ್ಣ ನಗಿ
ಮನಸು ಅರಳಸತೈತಿ
ಅದರಾಗ ಪ್ರೀತಿ ತುಂಬಿದ್ದರ
ಸಾಯವನ್ನ ಬದುಕಸತೈತಿ
(೩)
ಆಕಾಶದ ತುಂಬ ನಕ್ಷತ್ರ ಇದ್ದರ
ಬಾಳ ಚಂದ ಕಾಣಸತೈತಿ
ನಿನ್ನ ಮಾರಿ ತುಂಬಾ ನಗಿ
ಇದ್ದರ ನನಗ ಹಿತ ಅನಸತೈತಿ.
ಮರುಳಸಿದ್ದಪ್ಪ ದೊಡ್ಡಮನಿ