ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ಗಜಲ ದ್ಪಿಪದಿಗಳಲಿ ನಿನ್ನ ಪಾತ್ರ ಅಪರ ರದೀಫ್
ಮತ್ಲಾ ಕಳೆಕಟ್ಟೀತು ನೀನು ಆಗೆ ನಿಖರ ರದೀಫ್
ಪ್ರಾಸ ಪದವೆಂದು ಮಾತ್ರ ಬಳಸಿ ತಪ್ಪೆಸಗುವರು
ಒಮ್ಮೊಮ್ಮ ಕಾಫಿಯಾಗಿಂತ ಆಗುವೆ ಪ್ರಖರ ರದೀಫ್
ರಾಜರಿಗೆ ಮಂತ್ರಿ ಜೊತೆ ಇದ್ದೊಡೆ ಸಭೆಗೆ ಕಳೆಯು
ನೀನಿರುವ ಗಜಲೇ ಆಗಿದೆ ಒಂದು ಪ್ರಕರ ರದೀಫ್
ಹಲವು ಬಾರಿ ಮುಂಗಾರು ಮಿಂಚಿನಂತೆ ತೋರ್ಗೊಡುವೆ
ಸಾಕಿ,ಗಾಲಿಬ್ಎನ್ನುತ ಏರುವೆ ನೀ ಗಜಲ ಶಿಖರ ರದೀಫ್
ಕೃಷ್ಣಾ! ಮುರಳಿ ನಾದ ಗೋಪಿಯರ ಸೆಳೆವಂತೆ ನಿನ್ನರಿವು
ಶಿವನ ಮುಡಿಯ ಶೋಭಿತ ವಕ್ರಚಂದ್ರ ಶೇಖರ ರಧೀಫ್.
ಅಪರ : ಅತಿ ಶ್ರೇಷ್ಠ
ನಿಖರ. : ಕರಾರುವಾಕ್ಕು
ಪ್ರಖರ. : ತೀಕ್ಷ್ಣವಾಗಿ
ಪ್ರಕರ. :ಗುಂಪು
ಶಿಖರ : ಬೆಟ್ಟತುದಿ
ಶೇಖರ : ಶಿರಾಭರಣ
—————————–
ಬಾಗೇಪಲ್ಲಿ