ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಬದುಕು
ಭೂಮಿಯ ಗೀತೆಯೇ ಮಕ್ಕಳ ಮಾತು ಆಲಿಸಬೇಕು ಸನಿಹದಲಿ
ಪ್ರೀತಿಯ ನಡೆಗೆ ಮಕ್ಕಳ ನುಡಿಯನು ಅರಿಯಲೇಬೇಕು ಬದುಕಿನಲಿ
ಅಂಗಳ ತುಂಬಾ ಮಕ್ಕಳ ಕುಣಿತವು
ನೋಡಲೇಬೇಕು ಮುಪ್ಪಿನಲಿ
ಹಿರಿಯರ ಮಾತದು ನೀತಿಯ ಪಾಠವು ಅರಿಯಲೇಬೇಕು ಸೊಗಸಿನಲಿ
ಬದುಕನು ಕಟ್ಟಲು ನೀತಿಯ ಪಾಲಿಸಿ
ಜೀವಿಸಬೇಕು ನ್ಯಾಯದಲಿ
ವಿಧವಿಧ ಕಷ್ಟವ ನುಂಗುತ ನಡೆಯಲು
ನಗಲೇಬೇಕು ಸಹನೆಯಲಿ
ಬೆಟ್ಟದ ತುದಿಗೆ ತಲುಪುವ ಗುರಿಯು
ನಡೆಯಲೇಬೇಕು ಮುಳ್ಳಿನಲಿ
ಚಲವು ಇರದಿರೆ ಸಾಗದು ಬದುಕು
ತಿಳಿಯಲೇಬೇಕು ನೀತಿಯಲಿ
ಮನ್ಸೂರ್ ಮೂಲ್ಕಿ