ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣುಅವರ ಎರಡು ಕವಿತೆಗಳು
ಅವತರಣ
ಮುಗಿಲಿನೆಲ್ಲೆಡೆಯಲ್ಲೂ ಮೋಡಗಳು ತುಂಬಿರಲು
ಸೂರ್ಯನ ರಣಬೆಂಕಿ ಮಾಸುತಿಹುದು
ತಣ್ಣನೆಯ ತಂಗಾಳಿ ಸುಂಯ್ ಎಂದು ಸೋಕಲು
ಜೀವರಾಶಿಯ ಒಡಲು ತಂಪಾಗುತಿಹುದು
ಓಡುತಿಹ ಮೇಘಗಳು ಮಿಕ್ಕಿ ಮಳೆಯಾಗಲು
ಜಲಧಾರೆ ಭುವಿಯೊಳಗೆ ಜಾರುತಿಹುದು
ಸ್ವಚ್ಛಂದ ಹಕ್ಕಿಗಳ ಪಿಲಿಪಿಲಿಯು ಕೇಳಿಸಲು
ತೊರೆಗಳು ಉಕ್ಕುಕ್ಕಿ ಹರಿಯುತಿಹುದು
ಎಲ್ಲೆಲ್ಲೂ ಹಸಿರಬನ ಮೈ ಚಾಚಿ ಹಬ್ಬಿರಲು
ಎಳೆಯೊಡಲು ಬಸಿರಾಗಿ ನಾಚುತಿಹುದು
ಏನಿದು ಸಂಭ್ರಮವು ಸೃಷ್ಟಿಯ ಐಸಿರಿಯು
ನಿಸರ್ಗವೋ ನಾಕದ ಅವತರಣವ
****
ಗೀಳೋ… ಮನೆ ಹಾಳೋ….
ಮಂಗನ ಕೈಯಲ್ಲಿ ಮಾಣಿಕ್ಯ ಬಂದರೆ.. ಎಂಬ ನುಡಿಗೆ ಇದೊಂದು ಒತ್ತು
ಈಗ ಮಂಗಗಳ ಕೈಯಲ್ಲಿ ಮೊಬೈಲ್ ಬಂತು
ಮೊಬೈಲ್ ಮನುಷ್ಯನ ಮಂಗ ಮಾಡಿಯಾಯ್ತು
ಅನ್ನ ನೀರು ನಿದ್ದೆ ಬಿಟ್ಟು ಮೊಬೈಲ್ ನೊಳಗೆ ಮನುಷ್ಯ ಮಂಕಾಗಿ ಬಿಟ್ಟ
ಶಾಲೆ ಪುಸ್ತಕ ಗುರು ಹಿರಿಯರನ್ನು ತ್ಯಜಿಸಿ ಮಗ ಮೊಬೈಲ್ ದಾಸನಾದ
ಹಗಲು ರಾತ್ರಿ ಮಳೆ ಚಳಿ ಬಿಸಿಲು ಗಾಳಿ ಎನ್ನದೆ ಮೊಬೈಲ್ ಸಂಗ ಮಾಡಿದ
ಗೆಳೆತನ ಸಂಬಂಧ ಅಭಿರುಚಿ ಮಾನ ಮೌಲ್ಯ ಮನುಷ್ಯತ್ವ ಎಲ್ಲವನ್ನು ಮರೆತ
ವ್ಯಕ್ತಿತ್ವ ತೊರೆದು ನರ ವಾನರನಾದ
ಅದೇ ಮೊಬೈಲ್ ಗೆ ಕಿಸಿಯುತ್ತಾ ಸೆಲ್ಫಿ ಕ್ಲಿಕ್ಕಿಸಿದ
ಶಾಲಿನಿ ಕೆಮ್ಮಣ್ಣು
ಇಂತಹ ಎಲೆ ಮರೆಯ ರಾಷ್ಟ ನಾಯಕರ ಪರಿಚಯವನ್ನು ನಮ್ಮ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಸರ್ ಉತ್ತಮ ಲೇಖನ ಅಭಿನಂದನೆಗಳು.