ಸವಿತಾ ದೇಶಮುಖ ಅವರ ಕವಿತೆ-ಜಯದೇವಿ ತಾಯಿ ಲಿಗಾಡೆಯವರ ನೆನಪಲ್ಲಿ ಕಾವ್ಯ ನಮನ

ಸಿದ್ದನ ವಸುಧೆಯಲಿ ಸ್ಪೂರಿಸಿ
ಸೊನ್ನಲಿಗೆ ಕರುಣೆಯ ಕೂಸು,
ಗಡಿನಾಡ ಮಗಳು
ಕರುನಾಡ ಸೊಸೆ
ಕನ್ನಡಿಗರ ತಾಯಿಯಾಗಿ ನಿಂದೆ
ನೀ ನನ್ನ ಅವ್ವ ದೊಡ್ಡವ್ವ

ಸದಾಚಾರದ ಖಣಿ ಸಾದ್ವಿಮಣಿ
ಸಮತೆಯ ಹಾಲಿನಲಿ
ಮಮತೆಯ ಬೆರೆಸಿ
ದೊಡ್ಡ ಸಂಸಾರ ನಿಗಿಸಿ

ಸಿದ್ದನ ವರವ ಪಡೆದ ಯೋಗಿಣಿ
ರಾಗಭೋಗಗಳ ಆಚೆ
ನಿಂತ ಸಂತಿಣಿ
ಧವಲ ವಸ್ತ್ರ ಧರಿಸಿ
ರುದ್ರಾಕ್ಷಿಮಾಲೆ ಬೆಳೆಯತೊಟ್ಟಿ
ವಜ್ರ ವೈಡೂರ್ಯ ದೂರವಿಟ್ಟಿ
ಸಿದ್ದರಾಮನ ಧ್ಯಾನದಿ
ಮೈ ಮರೆತೆ ಶುದ್ಧ ಮಾನಸ
ಜಲದಲಿ – ದೈವ ಸಾಕ್ಷಾತ್ಕಾರಣಿ
ಭಾವ ಪರವಶ ಬಂಧಿ,
ಮಿಥೈ ಜೀವನದ ಸಂತೆ….

ಸತ್ಯಕಾಯಕದಿ ಮನ ರಮಿಸಿ,
ಅಬಲೆಯರ ಕಣ್ಣುವರಿಸಿ
ಕನ್ನಡ ಶಾಲೆಗಳ ತೆರಸಿ
ಶಿಕ್ಷಕರ ವೃಂದ ಒದಗಿಸಿ
ಬೆಳಗಿದೆ ಶಿಕ್ಷಣ ಹಣತಿ
ನೀ ನನ್ನವ್ವ ದೊಡ್ಡವ್ವ

ಕನ್ನಡದಿ ಮಹಾಕಾವ್ಯ ರಚಿಸಿ
ಕಣ್ಮಣಿಗಳ ಕಣ್ಣು ತೆರೆಸಿದಿ
ರಜಾಕಾರ ರಕ್ಕಸರ
ಬಡಿದೊಡಿಸಿ
ಕರ್ನಾಟಕದ ಏಕೀಕರಣಕ್ಕೆ
ಕೈಜೋಡಿಸಿದೆ ,ನಿಜಾವನ
ಉಲ್ಲಂಸಿ -ಕನ್ನಡ ನಾಡನ್ನ ರಕ್ಷಿಸಿ

ಸೊನ್ನಲಿಗೆ ಕರುನಾಡ ಸೇರದಾದಾಗ,
ಶರಣರ ಬೀಡು ಕಲ್ಯಾಣದತ್ತ
ನಡೆದೆ ಶರಣರ ಭೂಮಿಯಲ್ಲಿ
ಒಂದಾಗಿ ಸಾವಿರದ ಪದಗಳು
ಕಾವೈ ರಚಿಸಿ….
ದಿವ್ಯ ಜ್ಞಾನ ಪಡೆಯುತ
ಶರಣರ ಗತಕಾಲ ಮರುಕಳಿಸಿ
ಸಿದ್ಧಶೈಲದಲಿ ಬಯಲೊಳು ಬಯಲಾದೆ
ನನ್ನವ್ವ ನೀ ದೊಡ್ಡವ್ವ

ಜಗದಲಿ ನುಡಿ ನಗಾರಿ ಬಾರಿಸಿ
ಜಯದ ಜಯಭೇರಿ
ಶರಣರ ವಂಶಕ್ಕೆ ಶುಭ ಕಳೆ
ಜಯದೇವಿತಾಯಿ ನೀನು

ವಿಳಾಸವಾದೆ ಕಲ್ಯಾಣ ಬಸವವಂಗ….


2 thoughts on “ಸವಿತಾ ದೇಶಮುಖ ಅವರ ಕವಿತೆ-ಜಯದೇವಿ ತಾಯಿ ಲಿಗಾಡೆಯವರ ನೆನಪಲ್ಲಿ ಕಾವ್ಯ ನಮನ

Leave a Reply

Back To Top