ಕಾವ್ಯ ಸಂಗಾತಿ
ಎಂ. ಬಿ. ಸಂತೋಷ್
ಹಾಯ್ಕುಗಳು
ಅವಸರಕ್ಕೆ
ಒಲಿದ ಪ್ರೀತಿ ಹೆಚ್ಚು
ಕಾಲ ಇರದು
ಅಮ್ಮನಿದ್ದರೆ
ಕಷ್ಟಗಳು ಹೊಸ್ತಿಲು
ದಾಟಿ ಬರವು
ಹೇಳಲೇಬೇಕು
ಸುಂದರ ಬದುಕಿಗೆ
ನಾವು ವಿದಾಯ
ಮುಡಿಪಾಗಲಿ
ಶಾರದೆಯ ಸೇವೆಗೆ
ನನ್ನೀ ಬದುಕು
ಸಮುದ್ರದಲ್ಲಿ
ಇದ್ದೇನೆ, ಸಿಹಿನೀರು
ಸಿಗುವುದೆಂದು!
ನಾಳೆ ಎಂದಾಗ
ಹಾಳು ಎಂಬುದ ಮನ
ತಿಳಿದಿರಲಿ
ಕನಸುಗಳ
ಕಾಣುವುದು ತಪ್ಪಲ್ಲ
ಸಾಧಿಸಬೇಕು
ಬದುಕಿದ್ದಾಗ
ನೋಡಲಿಲ್ಲ, ಸತ್ತಾಗ
ನುಡಿ ನಮನ
ಎಂ. ಬಿ. ಸಂತೋಷ್, ಮೈಸೂರು
ಎಲ್ಲವೂ ಚೆನ್ನಾಗಿವೆ. ಕೊನೆಯದು ಇಷ್ಟವಾಯಿತು.
ಹಾಯ್ಕುಗಳ ರಚನೆ ಎಲ್ಲವು ಚೆನ್ನಾಗಿವೆ.