ಜಯಶ್ರೀ ಎಸ್ ಪಾಟೀಲ ಅವರ ಹೊಸ ಕವಿತೆ-“ಜೀವನ ಅಂದ್ರ ಹೀಂಗ ಇರಬೇಕ”

ಜೀವನ ಅಂದ್ರ ಹೀಂಗ ಇರಬೇಕ
ನಾಕ ಮಂದಿ ಹೌದ ಅಂತಿರಬೇಕ
ಇವರನ್ನ ನೋಡಿ ಕಲೀರಿ ಅನ್ಬೇಕ
ಮಂದ್ಯಾಗ ಮಾದರಿಯಾಗಿರಬೇಕ

ಹೋಗಳೋರ ಹೋಗಳತಿರ್ತಾರ
ಬಯ್ಯೋರು ಬಯ್ಯಕೋತಿರ್ತಾರ
ಹೊಗಳೋರಿಗೆ ನಮ್ಮ ನಮಸ್ಕಾರ
ಬಯ್ಯೋರಿಗೆ ಬರೋಬ್ಬರಿ ತಿರಸ್ಕಾರ

ಇದ್ದಿದ್ದರಾಗ ಸಂತೋಷಪಡಬೇಕ
ಹಾಸಿಗೆ ಇದ್ದಷ್ಟ ಕಾಲ ಚಾಚಬೇಕ
ಸಜ್ಜನರ ಸಂಗಾ ಸಟ್ನ ಮಾಡ್ಬೇಕ
ದುಷ್ಟರ ಸಂಗಾ ಪಟ್ನ ಬಿಡಬೇಕ

ಮೈಬಗ್ಗಿಸಿ ಬೆವರ್ಸುರಿಸಿ ದುಡಿಬೇಕ
ಕೈ ತುಂಬಾ ಸಂಬಳಾ ತರತಿರಬೇಕ
ಹೆಂಡ್ತಿಮಕ್ಕಳ್ನ ಚೆಂದ ನೋಡ್ಕೊಬೇಕ
ವಾರಕ್ಕೊಮ್ಮೆ ಮಜಾ ಮಾಡಬೇಕ

ನೀತಿ ನಿಯಮಗಳನ ದಾಟಬಾರದ
ತಂದೆ ತಾಯಿ ಮಾತ ಮೀರಬಾರದ
ಹಿರ್ಯಾರಿಗೆ ಇದಿರ ಮಾತಾಡ್ಬಾರದ
ತಗ್ಗಿಬಗ್ಗಿ ನಡಿಯೋದ ಮರೀಬಾರದ

ಕತ್ತಲದಾಗ ದೀಪಾನ ಹಿಡಕೊಂಡ
ದಾರಿಯುದ್ದ ಬೆಳಕ ಮಾಡಿಕೊಂಡ
ಕಲ್ಲು ಮುಳ್ಳು ಬಾಜೂ ಸರಿಸ್ಕೊಂಡ
ಸಾಗ್ಬೇಕ ಗುರಿ ಮುಟ್ಟಾಕ ನಡ್ಕೊಂಡ

ಇರುತನಕ ನಕ್ಕೊಂತ ಬಾಳಬೇಕ
ದ್ವೇಷಾ ಬಿಟ್ಟು ಪ್ರೀತಿ ಹಂಚಬೇಕ
ನಲೀತಿರ್ಬೇಕ ಉಸಿರ ನಿಲ್ಲುತನಕ
ಸಂತೃಪ್ತಿಯ ಜೀವನ ಜೀವಿಸಬೇಕ


4 thoughts on “ಜಯಶ್ರೀ ಎಸ್ ಪಾಟೀಲ ಅವರ ಹೊಸ ಕವಿತೆ-“ಜೀವನ ಅಂದ್ರ ಹೀಂಗ ಇರಬೇಕ”

  1. ಉತ್ತಮ ಕವನ ಮೇಡಂ

    ಡಾ ಶಶಿಕಾಂತ್ ಪಟ್ಟಣ

Leave a Reply

Back To Top