ಮಧುಮಾಲತಿರುದ್ರೇಶ್ ಅವರ ಹಾಯ್ಕುಗಳು

ಮಾತು ಮಾಣಿಕ್ಯ
ಹದವರಿತು ನುಡಿ
ಪ್ರೀತಿ ದ್ವಿಗುಣ

ಮೌನ ಪಯಣ
ಸುಂದರ ಯಾನವಿದು
ಆಸ್ವಾದಿಸೋಣ

ಮೌನದೊಳಿದೆ
ಸಾವಿರ ಪದಗಳು
ನೂರು ಭಾವನೆ

ಹೆಚ್ಚಲಿ ಪ್ರೀತಿ
ಎಲ್ಲರೆದೆಯೊಳಗೆ
ದ್ವೇಷವಳಿದು

ದ್ವೇಷದ ಕಳೆ
ಕಡಿಮೆಯಾಗಲೆಂದು
ಸ್ನೇಹ ಬಿತ್ತೋಣ

ಎದೆಯಂಗಳ
ಸ್ವಾರ್ಥ ಕಡಿಮೆಯಾಗಿ
ಶುಭ್ರಗೊಳ್ಳಲಿ

ಇಳೆಯ ಧಗೆ
ಕ್ಷಣವೂ ಹೆಚ್ಚುತಿದೆ
ಸ್ವಾರ್ಥ ಕಿಡಿಗೆ


One thought on “ಮಧುಮಾಲತಿರುದ್ರೇಶ್ ಅವರ ಹಾಯ್ಕುಗಳು

Leave a Reply

Back To Top