ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜೀನನ ಶೈಲಿ ಮೊದಲಿನಂತಾಗಲು ಹಲವು ದಿನಗಳು ಬೇಕಾಗಬಹುದು .
ಕೊವಿಡ್ ಗೃಹಬಂಧನದಿ ಮನೆಯಲಿ ಕಾಲ ಕಳೆದದ್ದು ನೆನಪಾಗಬಹುದು .

ಕಛೇರಿಯಲಿ ಕುಳಿತು ಕಲಸ ನಿರ್ವಹಿಸೆ ಮನವು ಒಪ್ಪದೀಗ
ಅರೆ ಬೆತ್ತಲಲಿ ಸೋಫಾದ ಕಾರ್ಯದಪರಿ ಸರಿ ಎನಿಸಬಹುದು

ಹಳೆಯ ಕಡತಗಳನು ದೂಳು ತುಂಬಿದ ಕಪಾಟಿಲಿ ಹುಡುಕಬೇಕು
ಗೃಹ ಕೃತ್ಯಗಳಲಿ ಹಳೆ ಚೀಲದೂಳಗೆ ಆಲ್ಬಂ ಕಂಡದ್ದು ನಗೆ ತಂದಿರಬಹುದು

ಹಳೆಯ ನನ್ನ ಯುವತನದ ಭಾವಚಿತ್ರ ಕಂಡೆನಗೆ ಸಂಭ್ರಾಮಾಶ್ಚರ್ಯಗಳು
ಏಳುಮಲ್ಲಿಗೆ ತೂಕದ ಪತ್ನಿ ಏಳು ಮೆಲ್ಲಗೆ ಆಗಿದ್ದು ಬೇಸರ ಆಗಿರಬಹುದು

ಸಮಾಯಾ ಸಮಯವಿಲ್ಲದೆ ಪತ್ನಿಯೊಂದಿಗೆ ಅಡಿಗೆ ಮನೆ ಸರಸ!
ಮಕ್ಕಳು ಬೇಗ ಮಲಗದ್ದು ಕೋಪಕ್ಕೆ ಹಾದಿಯಾಗಿರಬಹುದು

ಕೃಷ್ಣಾ! ಹಳೆಯ ಕಾಲೇಜು ಗೆಳತಿ ಚಿತ್ರನೋಡಿ ಮಕ್ಕಳು ಇವರಾರೆಂದಾಗ
ನನ್ನ ಬೆಬೆಬ್ಯಾ ಉತ್ತರ ಕೇಳಿ ಹೆಂಡತಿ ಮಕ್ಕಳು ಆಗ ತಬ್ಬಿಬ್ಬಾಗಿರಬಹುದು .

(ಲಾಕ್ಡೌನ್ ನಂತರದ ದಿನಗಳಲಿ ನಿಯಮವಿಲ್ಲದೆ ಬರೆದ ಗಜಲಿನ ತಿದ್ದುಪಡಿ)

" ನನ್ನ  ತಪ್ಪು ನನ್ನ ಹೆಮ್ಮೆ "
---------------------------------

About The Author

Leave a Reply

You cannot copy content of this page

Scroll to Top