ಗೀತಾ ಕೇಶವ್ ಭಟ್ ಬೊಪ್ನಳ್ಳಿಅವರ ಕವನ-“ಅಂತರಂಗ”

ಬಂದಾಗ ಹತ್ತಿರ ಕತ್ತೆತ್ತಿ ನೋಡದವನು
ಈಗ ನೋಡುವೆಯೇನು?

ಮುಗಿದ ಮೇಲೆ ಹಾಡು
ಪಕ್ಕ ವಾದ್ಯದವನಿಗೇನು ಕೆಲಸ

ಕೊನೆಯಾದ ಕೊರಳ ಶಬುದಗಳ
ಅಂತಿಮ ಯಾತ್ರೆ ಮುಗಿದಿಲ್ಲ

ಬಂಧ ಸಂಬಂಧಗಳ ನಡುವಣ
ಗೋಡೆ ಬಾನೆತ್ತರಕೆ ಬೆಳೆದಿದೆ

ತೊಳೆದ ಮೇಲೆ ತಳುಕು ಬಳುಕಿನ ಬಣ್ಣ
ಸಿಗುತಿಲ್ಲ ಮುಖದ ಗುರುತು ಸುಲಭದಲಿ

ಮೌನದಲಿ ಕಳೆದ ವೇಳೆಯ ನೋವಿನಲಿ
ಬಣ್ಣಗಳಿವೆಯೇ ಆಕೃತಿ ಆಕಾರಗಳಲಿ

ಕಣ್ಣೀರೊರೆಸುವ ಕೈಗಳಿವೆಯೆಂದು
ಎದೆಯ ಕರಗಿಸಿ ಕಣ್ಣೀರ ಸುರಿಸಲಾಗದು

ಇದೆಯೆಂದು ಖಾಲಿ ಹಾಳೆಅಂತರಂಗದ ಭಾವಗಳನೆಲ್ಲ ಬರೆಯಲಾಗದು


One thought on “ಗೀತಾ ಕೇಶವ್ ಭಟ್ ಬೊಪ್ನಳ್ಳಿಅವರ ಕವನ-“ಅಂತರಂಗ”

  1. ಪ್ರಕಟಣೆಗಾಗಿ ಮೆಚ್ಚುಗೆಗಾಗಿ ಧನ್ಯವಾದಗಳು

Leave a Reply

Back To Top