ವೈಷ್ಣವ ಜನತೋ ತೇನೆ ತಾಹೀಯೆ ಜೇ ಕನ್ನಡಭಾವಾನುವಾದ : ಪಿ.ವೆಂಕಟಾಚಲಯ್ಯ.

ಸ್ವಾತ್ವಿಕ ಮನುಜನು, ವೈಷ್ಣವ ಪುರುಷನು,
ಪರರ ನೋವಿಗೆ , ಸ್ಪಂದಿಸುತಿರು ವನು.
ಅನ್ಯರ ದು:ಖಕೆ, ಸುಕೃತ ಬಯಸು ವ,
ಪ್ರತಿಫಲವೇನು, ಎಂದಿಗೂ ಬಯ ಸನು.

ಲೋಕ ನಿಂದನೆಗೆ, ಸಹನಾಶೀಲನು,
ನಿಂದಿಸಿದವರನು, ನಿಂದಿಸಬಯಸ ನು.
ಕಾಯ, ವಾಚಾ, ಮನಸ, ಸತ್ಯವನು,
ಆಚರಿಸುತಲೀ, ತಾನ್ ನಡೆಯುವ ವನು.

ಮತ್ಸರ ವರ್ಜಿಸಿ, ಸಮದೃಷ್ಟಿಯಲಿ,
ಮಾತೃಭಾವವನು, ಪರಸ್ತ್ರೀಯರಲಿ,
ಅಸತ್ಯದ ನುಡಿಗೆ, ಜಿಹ್ವೆಯ ಬಳಸ ದ,
ಪರಧನಕೆಂದಿಗು, ಆಸೆಯ ತೋರ ದ,

ಮಾಯಾ ಮೋಸದ, ಬಂಧನ ತ್ಯಜಿ ಸಿ,
ಜೀವನದಲ್ಲಿ, ವೈರಾಗ್ಯವ ಧರಿಸಿ,
ರಾಮನಾಮವನು, ಜಪಸಿ ತಪಸ ವನು,
ಸಕಲ ತೀರ್ಥದಲಿ, ಮಿಂದ ಪುನೀ ತನು.

ಅಲೋಭಿ- ಅಕಪಟಿ, ಪರಿಪೂರ್ಣನ ವನು.
ಕಾಮಕ್ರೋಧವ, ನಿವಾರಿಸಿದವನು.
ಅಂತಹ ಮಹಿಮನ, ಸದ್ಗುಣವಂ ತನ,
ದರುಶನ ಭಾಗ್ಯಕೆ, ಕವಿ ಕಾಯ್ದಿ ಹನು.


Leave a Reply

Back To Top