ಶ್ರೀಪಾದ ಆಲಗೂಡಕರಅವರ ಗಜಲ್ ಅಪ್ಪನ ಬಗ್ಗೆ

ಅವಿರತ ಅನನ್ಯ ಪ್ರೀತಿಯ ಮಳೆಯನು ಹರಿಸುವನು ಅಪ್ಪ
ಅವನಿಯ ಅಂತರಾಳ ಅಂಬರದ ವಿಶಾಲತೆ ಬೀರಿಸುವನು ಅಪ್ಪ

ಅವತರಿಸಿದ ಪಿತಾಮಹ ಸಂಕಟ ನೋವಿನ ಬಾಳನು ಸಹಿಸುವನೇ
ಆವರಿಸಿದ ಸಂಸಾರದ ಭಾರವನು ಬಾಹುಗಳಿಗೆ ಏರಿಸುವನು ಅಪ್ಪ

ಅನವರತ ಕರುಳ ಕುಡಿಯ ಏಳಿಗೆಗಾಗಿ ದುಡಿಯುತ ಇರುವನು
ಅನುಭವದ ಆಧಾರದ ಬದುಕನು ರೂಪಿಸಿ ಬರಿಸುವನು ಅಪ್ಪ

ಅಸಾಮಾನ್ಯ ವರ್ತನೆಯ ಎದುರಿಸಿ ಧೈರ್ಯ ಸಂಯಮ ತೋರಿದನು
ಅಸಹಾಯಕತೆ ಅಡಗಿಸಿ ನಗುಮೊಗದಿ ದೋಣಿಯ ದಡ ಸೇರಿಸುವನು ಅಪ್ಪ

ಅಗಾಧ ಶಾಂತತೆ ಮೌನದ ಪರಿಮಿತಿಯ ಅರಿತವನಿವ ಶ್ರೀಪಾದ
ಅಗೋಚರ ಅಪ್ರತಿಮ ಶಕ್ತಿಯ ಅಲೌಕಿಕ ಜ್ಞಾನವನು ಸುರಿಸುವನು ಅಪ್ಪ

Leave a Reply

Back To Top