ಗಾಯತ್ರಿ ಎಸ್ ಕೆ ಕವಿತೆ-ಹೊಸ ದಿಗಂತ

ಆಗುತ್ತಿದೆ ಬೆಳೆಯುತ್ತಿದೆ
ಹೊಸ ದಿಗಂತ ಚಿಮ್ಮುತ್ತಿದೆ
ಹೊಸತು ಪ್ರಭುತ್ವ
ನಿತ್ಯ ಆಕಾಂಕ್ಷೆ ಒಲವ ಚಿತ್ತ
ಬಾಳ ಬೆಳಕು ಹೊಳಪು

ಬಂದಾಗ ಕೊಂಚ ಈಗ
ಮುಗಿಲು ಮುಟ್ಟಿದೆ
ಹೊಸ ಹೊಸ ಯತ್ನ
ಎಲ್ಲ ನಮ್ಮ ನಮ್ಮ ಅಸ್ತಿತ್ವ
ಹೊಂಬೆಳಕು ಹೊಸತು

ಎಲ್ಲ ಕನಸಂತೆ ಗೋಚರ
ಚೆಲುವ ಚಿತ್ತಾರ ಮನೋಹರ
ಮೊಳಕೆಯೊಡೆದಿದೆ ಸನಿಹ
ಖುಷಿಯ ಸಾಗರವಿಹುದು
ಬದಲಾವಣೆಯ ನೂತನ

ಬದುಕೊಂದು ಸಂತಸ
ಎಲ್ಲ ನಮಗೆ ವಿಸ್ಮಯ
ಜಗತ್ತು ನಿರ್ಮಲ ಮನದ
ಬೆಂಬಲ ಸೃಷ್ಟಿ ವೈಭವ
ನೋಡುವ ಎಲ್ಲವ ನೋಟ
ಕಾಡುವುದು ಸನಿಹದಾಟ

ಪರಂಪರೆಯ ಬದಲಾದ
ಆಧುನೀಕರಣ ನೇತ್ರಾ
ಚಂದ ಅಂದದ ಬೀಡು
ಚೆಲುವ ಪೃಥ್ವಿಯ ನೋಡು
ರಮಣೀಯ ಮಧುರತೆಯ
ತಾಣ ಸೊಗಸು ಕಾಣ..!!


One thought on “ಗಾಯತ್ರಿ ಎಸ್ ಕೆ ಕವಿತೆ-ಹೊಸ ದಿಗಂತ

Leave a Reply

Back To Top