ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ಅಪ್ಪ

ಆಕಾಶಕ್ಕೆ ಏಣಿ ಹಾಕಲು ಸಾಧ್ಯವಿಲ್ಲ
ಅಪ್ಪನ ಪ್ರೀತಿಗೆ ಬೆಲೆ ಕಟ್ಟೋಕೆ ಸಾಧ್ಯವಿಲ್ಲ
ಆಗಸದಲ್ಲಿ ಹೊಳೆಯುವ ತಾರೆ ಆ ನಕ್ಷತ್ರ
ಈ ಧರೆಯಲ್ಲಿ ಹೊಳೆಯುವ ತಾರೆ ಅಪ್ಪ
ಅನ್ನೋ ಈ ನಕ್ಷತ್ರ..!!

ಅಪ್ಪನ ಮಡಿಲೆ ಮಕ್ಕಳ ಪಾಲಿಗೆ ಕೈಲಾಸ
ಅಪ್ಪನ ದುಡಿಮೆಯೇ ಮಕ್ಕಳ ಪಾಲಿನ ಆನಂದ
ಅಪ್ಪನ ಕನಸುಗಳೇ ಮಕ್ಕಳ ಮುಂದಿನ ಭವಿಷ್ಯ
ಅವರ ಆ ಭವಿಷ್ಯದಲ್ಲೇ ಕಳೆಯುವನು ತನ್ನ
ಜೀವನದ ಎಲ್ಲಾ ಕಹಿ ನೆನಪುಗಳ ರಹಸ್ಯ..!!

ಅಪ್ಪನೆಂದರೆ ಮಕ್ಕಳ ಪಾಲಿನ ಅನ್ನದಾತನಂತೆ
ಅಪ್ಪನೆಂದರೆ ಮಕ್ಕಳ ಪಾಲಿನ ದೇವದಾತನಂತೆ
ಅಪ್ಪನೆಂದರೆ ಮಕ್ಕಳ ಪಾಲಿನ ಕೈಲಾಸನಾಥನಂತೆ
ಆ ಕೈಲಾಸನಾಥನ ಮಡಿಲೆ ಮಕ್ಕಳ ಪಾಲಿನ
ಸ್ವಗ೯ಲೋಕವಂತೆ..!!


Leave a Reply

Back To Top