ಕಾಡಜ್ಜಿ ಮಂಜುನಾಥ ಕವಿತೆ-ನನ್ನಪ್ಪ

ಬದುಕಿಗೆ
ಅನುಭವದ ನುಡಿ
ಕಲಿಸಿ;

ಜೀವನಕೆ
ಅನುಭಾವದ ನಡೆ
ತಿಳಿಸಿ;

ಕಷ್ಟಗಳನು ಕರ್ಮದ
ಬೆವರಲಿ
ಎದುರಿಸಿ;

ಸುಖವ ಬಯಸದೇ
ಆಸೆಗಳ ಮನದಿಂದ
ತ್ಯಜಿಸಿ;

ಕುಟುಂಬದ ಭಾರವ
ಹೊತ್ತು ಬದುಕು
ಸಾಗಿಸಿ;

ತುತ್ತು ಕೂಳಿಗೆ
ಬೆವರಲಿ ರಕ್ತವ
ಹರಿಸಿ;

ತನ್ನಾಸೆಗಳ
ಶೇಷವಿಲ್ಲದೇ
ಕರ್ಪೂರದಂತೆ
ದಹಿಸಿ;

ಯಾರ ಮುಂದೆಯೂ
ಕೈಚಾಚಿ ತಲೆತಗ್ಗಿಸದ
ನಡೆಯನು
ಅನುಕೂಲಿಸಿ;

ಅನುಭೂತಿ, ಅನುಭಾವದ
ಹೃದಯವ
ಹದಗೊಳಿಸಿ;

ಪ್ರತಿ ತುತ್ತಿಗೂ
ತನ್ನ ಬೆವರನು
ಪ್ರತಿಫಲವಾಗಿಸಿ ;

ಸಿಟ್ಟಿಗೆ ಬುದ್ದಿ
ನೀಡದೆ
ತಾಳ್ಮೆಯ ಪಾಠವ
ಅನುವಾದಿಸಿ;

ಪರರ ವಿಷಯಕೆ
ಗಮನ ನೀಡದ
ಮೌನವಾಗಿಸಿ;

ಗೌರವದ ಬದುಕನು
ಕಲಿಸಿದ
ಹಿಮಾಲಯ ಪರ್ವತ
ನನ್ನಪ್ಪ….!!
—————————–

Leave a Reply

Back To Top