ಡಾ ಗೀತಾ ಡಿಗ್ಗೆ ಅವರಕವಿತೆ-ಕ್ಷಣ ಸಾಕು

ಪ್ರೀತಿಯ ಆರಂಭಕೆ
ಕ್ಷಣ ಸಾಕು
ಜೊತೆಗೂಡಲು
ಋಣ ಬೇಕು


    ಮಳೆಹನಿ ಬಿಸಿಲು
    ಆಕಸ್ಮಿಕ ಪ್ರೀತಿಯ ಸ್ಪರ್ಷ
    ಮೂಡುವದು ಆಗಸದಲಿ
     ಕಾಮನಬಿಲ್ಲು


ಕಡಲಾಳದಲಿ ಬಾಯ್ತೆರೆದ
ಚಿಪ್ಪಲಿ ಸ್ವಾತಿ ಮಳೆಹನಿ
ಪ್ರೀತಿಯ ಸ್ಪರ್ಷವದು
ಹೊಳೆವ ಮುತ್ತು


     ಹೂವಿನ ಮಕರಂದ
     ಅರಸುತ ಬಂದ ದುಂಬಿ
     ಪರಾಗ ಸ್ಪರ್ಷವು
     ಪ್ರೀತಿಯ ಜೀವದುಸಿರು


 ಪ್ರೀತಿ ಎರಡಕ್ಷರದ
 ಪದವದು ಮಹಾಕಾವ್ಯ
 ಪ್ರೀತಿ  ಅನಂತದಾಳದ
 ಮಹಾಸಾಗರ

3 thoughts on “ಡಾ ಗೀತಾ ಡಿಗ್ಗೆ ಅವರಕವಿತೆ-ಕ್ಷಣ ಸಾಕು

  1. ಅತ್ಯುತ್ತಮ ಕವನಗಳನ್ನು ಬರೆಯುತ್ತಿರಿ ಮೇಡಂ

  2. ಸುಂದರ ಭಾವದ ಅಂದದ ಕವನ ಮಾಡಮ್

Leave a Reply

Back To Top