ವಿದ್ಯಾಲೋಕೇಶ್ ಅವರ ಕವಿತೆ-ಸಾವಿನ ಕರೆ

ಬಾಳ ಪಯಣದ ಹಾದಿಯಲಿ
ಇರಲಿ ಎಂದಿಗೂ ನೆಮ್ಮದಿ
ನಕ್ಕು ನಗಿಸುವ ಸಮಯದಲಿ
ಕಾಲ ಕಳೆಯದಿರು ದ್ವೇಷದಿ

ನಾಳಿನ ಬಗೆಗಿನ ಚಿಂತೆಯನು
ಇಂದು ಮಾಡಿದರೆ ಚಿತೆಯು
ನಿನ್ನೆಯ ಬಗೆಗಿನ ವ್ಯಥೆಯನ್ನು
ನೆನೆದು ಕೂತರೆ ವ್ಯರ್ಥ ಕಥೆಯು

ಬದುಕು ಯಾರಿಗು ಹೊರೆಯಾಗದೆ
ಮೌನವಾಗಿರು ಉದ್ರೇಕ ಪಡದೆ
ನೋವ ಮನದಲ್ಲಿ ಬಚ್ಚಿಡು
ಮುಖದಿ ನಗುವ ಬಿಚ್ಚಿಡು

ಇರುವಷ್ಟು ದಿನ ಖುಷಿಯಾಗಿ
ಬಾಳು ನೀ ಬೆಳಕಾಗಿ
ಬಂದಂತೆ ಬದುಕು ಬದುಕಿನ ತೆರೆ
ತಿಳಿಯದು ಯಾವಾಗ ಬರುವುದೋ
ಸಾವಿನ ಕರೆ


Leave a Reply

Back To Top