ಮುಕ್ತೇಶ್ವರ ದೇವಾಲಯ: ಭುವನೇಶ್ವರ: ಒರಿಸ್ಸಾ ಜಿ. ಹರೀಶ್ ಬೇದ್ರೆ

ಒರಿಸ್ಸಾ ರಾಜ್ಯದ ರಾಜಧಾನಿಯಾಗಿರುವ ಭುವನೇಶ್ವರ ನಗರವನ್ನು ದೇವಾಲಯಗಳ ತವರೂರು ಎಂದು ಕರೆಯುತ್ತಾರೆ. ಇಲ್ಲಿರುವ ಅತ್ಯಂತ ಪ್ರಮುಖ ದೇವಸ್ಥಾನಗಳಲ್ಲಿ ಮುಕ್ತೇಶ್ವರ ದೇವಾಲಯವು ಒಂದು. ಇದನ್ನು ಸೋಮವಂಶಿಯರ ಆರಂಭ ಕಾಲದಲ್ಲಿ ಅಂದರೆ ಹತ್ತನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದು ಕಳಿಂಗ ವಾಸ್ತುಶಿಲ್ಪ ಶೈಲಿಯಲ್ಲಿದ್ದು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಇಲ್ಲಿ ಬರುವ ಭಕ್ತಾದಿಗಳ ಕಷ್ಟಗಳನ್ನು ಪರಿಹರಿಸುವ, ಅದರಿಂದ ಮುಕ್ತಿ ಕೊಡುವ ಶಿವ ಇರುವ ಕಾರಣ ಈ ದೇವಾಲಯವನ್ನು ಮುಕ್ತೇಶ್ವರ ದೇವಾಲಯ ಎಂದು ಕರೆಯಲಾಗುತ್ತದೆ. ಇದನ್ನು ಯಯಾತಿ ನಿರ್ಮಿಸಿದ ಎನ್ನುವ ಮಾತುಗಳು ಕೇಳಿಬರುತ್ತದೆ. ಆದರೆ ಇದಕ್ಕೆ ಯಾವುದೇ ಪುರಾವೆಗಳು ಸಿಗದ ಕಾರಣ ನಂಬಲು ಸಾಧ್ಯವಿಲ್ಲ.

ದೇವಾಲಯದ ಹೊರಗೋಡೆಯಲ್ಲಿ ಸರಸ್ವತಿ, ಗಣೇಶ, ಲಕುಲೀಶ (ತಾಂತ್ರಿಕ ಶೈವ ಧರ್ಮದ ಸಂಸ್ಥಾಪಕ) ಹಾಗೂ ಇತರ ಆಕರ್ಷಕ ಮೂರ್ತಿಗಳ ಕೆತ್ತನೆಯನ್ನು ಕಾಣಬಹುದು. ಈ ದೇವಾಲಯದ ಎದುರಿಗೆ ಸಿದ್ದೇಶ್ವರನ ಹಾಗೂ ಸ್ವಲ್ಪ ದೂರದಲ್ಲಿ ಪರಶುರಾಮ ದೇವಾಲಯವೂ ಇದೆ. ಕೆಂಪು ಕಲ್ಲಿನಲ್ಲಿ ಕೆತ್ತಿ ನಿರ್ಮಿಸಿರುವ ಈ ದೇವಸ್ಥಾನಗಳನ್ನು ನೋಡುವುದೇ ಒಂದು ಹಬ್ಬ. ಅದರಲ್ಲೂ ಫೋಟೋಗ್ರಫಿ ಹುಚ್ಚಿರುವರಿಗೆ ಆ ಜಾಗದಿಂದ ಕದಲುವ ಮನಸೇ ಆಗುವುದಿಲ್ಲ.


Leave a Reply

Back To Top