“ಮೊಬೈಲ್ ಹಿಂದಿರುಗಿಸಿದ ರಿಕ್ಷಾ ಚಾಲಕನ ಪ್ರಾಮಾಣಿಕತೆ, ನಿಷ್ಠೆ”ಅನುಭವ-ಲಲಿತಾ ಪ್ರಭು ಅಂಗಡಿ

ಅಯ್ಯೋ ಕಾಲ ಎಲ್ಲಾ ಕೆಟ್ಟೊಗದಿರೆ,ಯಾರ ಮೇಲೂ ನಂಬಿಕೆ ವಿಶ್ವಾಸ ಇಲ್ಲಾರಿ,ಭಾಳ ಸೂಕ್ಷ್ಮ ಕಾಲ ನೋಡ್ರಿ, ಮನೆಯವರ ಮೇಲೆನೇ ಭರವಸೆ ಇಡಲಾರದ ಕಾಲ  ಅಂತಾ ಏನೇನೋ ಹೇಳಿತಿವಿ,ಮಾತಾಡತಿವಿ, ಹೌದಲ್ರಿ,ಕಾಲ ಏನೂ ಬದಲಾಗಿಲ್ಲ ಮನುಷ್ಯರೇ ಬದಲಾಗೋದು,ಸಮಯ, ಸಂದರ್ಭಕ್ಕೆ ತಕ್ಕಂತೆ ನಟಿಸೋದು, ಹೌದಲ್ಲವೇ? ಇದೇನು ಇದು  ರಿಕ್ಷಾ ಚಾಲಕನ ಪ್ರಾಮಾಣಿಕತನ ನಿಷ್ಠೆ ಅಂತ ಶಿರೋನಾಮೆ ಇಟ್ಕೊಂಡು ಗುಡ್ಡ ಸುತ್ತಿ ಮೈಲಾರಕ್ಕೆ ಹೋದ ಹಾಗೆ ಎನೇನೋ ಸುತ್ತಿ ಬಳಸಿ ಬರೆಕತ್ತಿರಿ ಎನ್ ವಿಷಯ ಅಂತೀರಾ,
ಹಾಂ ಅದೇರಿ ಮನುಷ್ಯನಿಗೆ ಮರೆವು ಸಹಜ ಅಲ್ಲವೇ, ನೋಡಿ ಯಾವುದೇ ವಸ್ತು ಎಲ್ಲೊ ಇಟ್ಟು ಎಲ್ಲೋ ಹುಡುಕೋದು,
ಒಂದು ಸಣ್ಣ ಕತೆ ಒಬ್ಬ ಮುದುಕಿ ಮನೆಯಲ್ಲಿ ಕೌದಿ ಹೊಲಿಯುವಾಗ ಸೂಜಿ ಕಳೆದು ಹೋಯಿತು,ಆಗ ಆ ಮುದುಕಿ ಸೂಜಿಯನ್ನು ರೋಡಿನಲ್ಲಿ ಹುಡುಕ್ತಾ ಇದ್ಲಂತೆ, ದಾರಿಯಲ್ಲಿ ಒಬ್ರು ಕೇಳಿದ್ರಂತೆ ಎನ್ ಹುಡುಕ್ತಾ ಇದ್ದಿ ಅಜ್ಜಿ ಅಂತಾ,ಆ ಮುದುಕಿ ಸೂಜಿಯನ್ನು ಅಂತಾ ಹೇಳಿದಳು,ಆಗ ಅವರು ಸೂಜಿ ಕಳೆದದ್ದು ಎಲ್ಲಿ? ಅಂದಾಗ ಮನೆಯಲ್ಲಿ ಅಂದಾಗ , ಮತ್ತೆ ಇಲ್ಲಿ ಯಾಕೆ ಹುಡುಕ್ತಾ ಇದ್ದೀರಿ,ಅಂದಾಗ ಮನೆಯಲ್ಲಿ ಲೈಟ್ ಇಲ್ಲಾ, ಅದಕೆ ಇಲ್ಲಿ ಹುಡುಕ್ತಾ ಇದ್ದೀನಿ ಅಂತಾ ಹೇಳಿದಾಗ.

ಈ ಮರೆವೆಂಬ ಸಹಜ ಗುಣ ಎಲ್ಲರಲ್ಲೂ ಇರುತ್ತದೆ ಅಲ್ಲವೇ, ಮನೆಯಲ್ಲಿ, ಆಫೀಸಿನಲ್ಲಿ, ಹೋಟೆಲಿನಲ್ಲಿ, ಬಸ್ನಲ್ಲಿ, ಟ್ರೇನಿನಲ್ಲಿ, ಏರ್ಪೋರ್ಟ್ನಲಿ, ಅಂಗಡಿಯಲ್ಲಿ, ಶಾಲಾ ಕಾಲೇಜಿನಲ್ಲಿ, ಎಲ್ಲಿಯಾದರೂ ಸರಿ ಒಬ್ಬೊಬ್ಬರಿಗೆ ಒಂದೊಂದು ತರಹದ ಮರೆವೆನಿಂದ ಏನಾದರೂ ಅವಘಡನೆ ಆಗಿರುತ್ತದೆ, ಮಾತಾಡ್ತಾ ಮಾತಾಡ್ತಾ ಮರೆತು ಬಿಡೋದು, ಯಾವುದೇ ಗುಂಗಿನಲ್ಲಿ ಮರೆಯೋದು,ಸಹಜವೂ ಹೌದು, ಕೆಲವೊಬ್ಬರಿಗೆ ಮತ್ತೆ ದೊರಕಬಹುದು, ಕೆಲವೊಬ್ಬರಿಗೆ ಸಿಗದೇ ಇರಬಹುದು,

ಯಾಕೆ ಇವೆಲ್ಲ ಮರೆವಿನ ಮಾತು ಅಂದ್ರೆ.
ಮೇ 16ನೇ ತಾರೀಖಿನ ದಿವಸ ಬೆಂಗಳೂರಿನಿಂದ ಅಕ್ಕನ ಮಗ ಚೇತನ್ ಇಂಜಿನೀಯರ್ ಮುಂಬಯಿಗೆ ಬಂದಿದ್ದ ತನ್ನ ಆಫೀಸಿನ ಕೆಲಸ ಗೋಸ್ಕರ 2012ರಲಿ ಮುಂಬಯಿ ಏಕ್ಸೆಂಚರ್ ಗೋರೆಗಾಂವನಲಿ ಕೆಲಸ ಮಾಡಿದ ಪಿಎಫ್ ಗೋಸ್ಕರ್, ಇನ್ಕ್ವೈರಿ ಮಾಡಲು,ಸರಿ ಆಂಟಿ ನೀನು ಬಾ ಹೋಗೋಣ ಅಂತಾ ಬಾಂದ್ರಾ ಆಫೀಸಿಗೆ, ಹೋಗಿ ಬರುವಾಗ, ಅಂಧೇರಿ ವೆಸ್ಟ್ನಲಿ ರಾಧಾಕೃಷ್ಣ ಹೋಟೆಲ್ ಶುಚಿ,ರುಚಿ,ಸ್ವಚ್ಛ ಶುದ್ಧ ಕಾಯ್ದುಕೊಂಡ ಹೋಟೆಲಿನಲ್ಲಿ ಊಟ ಮಾಡಿಕೊಂಡು, ಸ್ಟೇಶನ್ ಹೋಗಿ, ಚರ್ಚ್ ಗೇಟ್ ರೈಲು  ಹಿಡಿದು , ಅಲ್ಲಿಂದ ಟ್ಯಾಕ್ಸಿ ತೆಗೆದು ಕೊಂಡು ಗೇಟ್ವೇ ಆಫ್ ಇಂಡಿಯಾ ಕೆ ಹೋಗಿ , ಅಲ್ಲೆಲ್ಲಾ ಒಂದು ರೌಂಡ್ ತಿರುಗಿ ಸಮುದ್ರ ವೀಕ್ಷಿಸಿ,ತಾಜ್ ಹೋಟೆಲ್ ದೂರದಿಂದ ನೋಡಿ, ಗೇಟ್ ವೇ ಆಫ್ ಇಂಡಿಯಾದಲ್ಲಿ ನಿಂತು ಫೋಟೋ ತೆಗೆಸಿಕೊಂಡ ಖುಷಿ, ಕಿಕ್ಕಿರಿದು ತುಂಬಿರುವ ಜನ ಸಾಗರವ ನೋಡಿದರೆ ಸಮುದ್ರದ ಆಳ ಅಲೆಗಳು, ಜನನಿಬಿಡದ ವೇಷ ಭೂಷಣ ವೈವಿದ್ಯತೆ, ಇಂಡಿಯಾದಲ್ಲಿ ಇರುವ ಎಲ್ಲಾ ಜನಾಂಗೀಯ ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಎನ್ನುವ ಕುವೆಂಪು ರಚಿತ ಬಾರತ ಜನನಿಯೆ ತನುಜಾತೆ ಮನದಲ್ಲಿ ಒಡಮೂಡಿತು.

ಮೂರು ವರ್ಷಮುಂಬಯಿಲಿ ಕೆಲಸ ಮಾಡಿದರೂ ನೋಡಿರಲಿಲ್ಲ ಇವೆಲ್ಲ ಎಂದ ಚೇತನ್,ದುರ್ಬಿನಿಯೊಳಗಿಂದ  ಸಮುದ್ರ ವೀಕ್ಷಣೆ ಮಾಡಿ ಎಲೆಫೇಂಟಾ ಕೇವ್ಸ್ ‌ಸ್ತಂಭ ನೋಡಿ, ಖುಷಿ ಪಟ್ಟು ಸುಮಾರು ಫೋಟೋ ಕ್ಲಿಕ್ ಮಾಡಿಕೊಂಡು ಇಬ್ರೂ ಮತ್ತೆ ಟ್ಯಾಕ್ಸಿ ಹಿಡಿದು ಸ್ಟೇಶನ್ ಗೆ ಬಂದು, ಅಂಧೇರಿ ಟ್ರೇನಾ ಹಿಡಿದುಕೊಂಡು ಅಂಧೇರಿಗೆ, ಇಳಿದು ಅಲ್ಲಿಂದ ಮತ್ತೆ ಆಟೋ ತೆಗೆದುಕೊಂಡು ಹರೇರಾಮ ಹರೇಕೃಷ್ಣ ಮಂದಿರಕ್ಕೆ ಹೋದೆವು, ಅಲ್ಲಿ ದರುಶನ ಪಡೆದು ಅಲ್ಲಿಂದಲೇ ಹತ್ತಿರ ಇರುವ ಜೂಹುಬೀಚ್ ಗೆ ಹೋದೆವು ಅಲ್ಲಿ ಹೋಗುವಷ್ಟರಲ್ಲಿ ಸೂರ್ಯ ಆಗಲೇ ಜಾರಿ ಬಿಟ್ಟಿದ್ದ, ಸೂರ್ಯಾಸ್ತದ ಸಮಯದಲಿ ಸಮುದ್ರ ಸಡಗರದ ಸಂಭ್ರಮವೇ ಬೇರೆ,
ಇಳೆ ಹೊತ್ತಾದರೂ ಸಮುದ್ರದ ಅಲೆಗಳ ಬಂದು ಹೋಗುವ ರಭಸದ ಸಲ್ಲಾಪ ಪುಟಿದೆದ್ದು ಅಪ್ಪಳಿಸುವ


ನರ್ತನದ ನಿನಾದ
ಕಣ್ಮನಗಳಿಗೆ ಆನಂದ
ಕರ್ಣಗಳಿಗೆ ಇಂಪಾದಗಾನ
ಕೇಳಿದ ಭಾಸ.

ಆ ನೀಲಿ, ತಾರೆಗಳ ಮದ್ಯೆ ಆಕಾಶ ನೋಡಿದರೆ, ಸಮುದ್ರದ ಆಳ ಅಲೆಗಳು
ಸಮುದ್ರದ ಅಗಾಧತೆಯ ಮುಂದೆ ಮನುಷ್ಯನ ಕುಬ್ಜತೆ, ಎಲ್ಲಾ ಎನೋ ಲೆಕ್ಕ ಹಾಕುವಷ್ಟರಲಿ ಆಂಟಿ ಹೋಗೋಣ ಮನೆಗೆ ಎಂದಾಗ ಚೇತನ್, ಹಾಂ ನಡಿ ಹೋಗೋಣ, ಅಂತಾ ಸಣ್ಣ ಮರುಳಿನಲಿ ಮನೆ ಕಟ್ಟಿ, ಚಿತ್ರ ಬಿಡಿಸುವ ಗುಂಗಿನಿಂದ ಹೊರ ಬಂದೆ,
ರಿಕ್ಷಾ ಹಿಡಿದು ಮನೆಗೆ ಬರುವಾಗ ಇನ್ನೇನು ಮನೆ ಬರುವುದು ಐದು ನಿಮಿಷ ಇತ್ತು,ನಮ್ಮ ಚೇತನ್ ಗೆ ಬೆಂಗಳೂರಿಂದ ಆತನ ಹೆಂಡತಿ ಫೋನ್ ಮಾಡಿದ್ಲು,ಆತ ಮಾತಾಡ್ತಾ ಇರುವಾಗಲೇ ನಮ್ ಬಿಲ್ಡಿಂಗ್ ಗೇಟ್ಹತ್ತಿರ ರಿಕ್ಷಾ ನಿಲ್ಲಿಸಿದ ,ದುಡ್ಡು ಕೊಟ್ಟು ಇಳದ್ವಿ, ಆಗ ನನ್ ಫೋನ್ ರಿಂಗ್ ಆಯಿತು, ನಾನು ರಿಸೀವ್ ಮಾಡಬೇಕು ಅನ್ನುವಷ್ಟರಲಿ ಅವಾಗ ನನ್ ಜೊತೆ ಗಿದ್ದ ಚೇತನ್, ಅಯ್ಯೋ ಅಂಟಿ ನನ್ ಫೋನ್ ಎಂದ, ಎಲ್ಲಿದೆ ಅನ್ನುವಾಗಲೇ ಅಯ್ಯೋ ರಿಕ್ಷಾನಲಿ ಮರೆತಬಿಟ್ಟಿನಿ, ಅನ್ನೋದೇ ತಡ, ತಗಳಪ್ ನೋಡಿ  ಟೆನ್ಷನ್ ಸುರುವಾಯಿತು ನನಗೆ, ಸಡನ್ನಾಗಿ ಅಲ್ಲೆ ಪಕ್ಕದಲ್ಲಿ ಚಾಹದಂಗಡಿ ಮುಂದೆ ಒಂದು ಹುಡುಗ ಬೈಕ್ ಮೇಲೆ ಕುಂತುಗೊಂಡು ಸ್ಟಾರ್ಟ್ ಮಾಡಿ ಹೊರಡುವ ನನಿದ್ದ, ನಾನಂತೂ ಆ ಹುಡುಗನ ಮುಂದೆ ನಿಂತು ರಿಕ್ವೆಸ್ಟ್ ಮಾಡಿ ಪ್ಲೀಸ್,ಇನಕಾ ಮೊಬೈಲ್ ಓ ರಿಕ್ಷಾ ಮೆ ಹೈ, ಹೆಲ್ಪ್ ಕರೋ ಪ್ಲೀಸ್,ಅಂತಾ ಹೇಳಿ ನನ್ನ ಮೊಬೈಲ್ನ ಚೇತನ್ ಕೈ ಯಲಿ ಕೊಟ್ಟು ಈ ಮೊಬೈಲ್ನಿಂದ ನಿನ್ನ ಮೊಬೈಲ್ಗೆ ಫೋನ್ ಮಾಡು, ಹತ್ತು ಈತನ ಹಿಂದೆ ಈತನ ಜೊತೆ   ಹೋಗು ಅಂತಾ ಕಳಿಸಿದೆ,

ಇವರು ಬೈಕ್ ಹತ್ತಿ ಹೋಗುವಷ್ಟರಲ್ಲಿ, ಸಿಗ್ನಲ್ ಲಿಂದ ಆಟೋ ರಿಕ್ಷಾ ಬೇರೆ ಕಡೆ ಹೋಯಿತಂತೆ,ಇವರ ಗಾಡಿ ಬೇರೆ ಕಡೆ,ಆಗ ಟೆನ್ಷನ್ ಸುರುವಾಯಿತು ನನ ಮೊಬೈಲ್ ಚೇತನ್ ಗೆ ಕೊಟ್ಟೆ,ಹೇಗೆ ಕಾಂಟಾಕ್ಟ್ ಮಾಡೋದು ಅಂತ, ಮನೆಗೆ ಬಂದು ಲ್ಯಾಂಡ್ ಲೈನ್ ಲಿಂದ ನನ್ ಮೊಬೈಲ್ಗೆ ಫೋನ್ ಮಾಡಿದೆ,ಆಗ ಚೇತನ್ ಆಂಟಿ ಇಲ್ಲೆ ಗೇಟ್ ಹತ್ತಿರ ಬರ್ತಾ ಇದಿನಿ,ಆ ಆಟೋ ಸಿಗಲಿಲ್ಲ, ಆದರೆ ಆಟೋ ಡ್ರೈವರ್ ಫೋನ್ ರಿಸೀವ್ ಮಾಡಿದ,  ಯಾರೋ ಪ್ಯಾಸೆಂಜರ್ ನೋಡಿ ,ಕಿಸಿನೆ ಮೊಬೈಲ್ ಇದರ್ ಚೋಡ್ ಕೆ ಗಯೆ ಎಂದಾಗ , ರಿಕ್ಷಾವಾಲ, ಓ ಅಭಿ ಉತರ್ಗಯೆ ವೋ ಲೋಗೋಂಕಾ ಎಂದು ತನ್ನ ಹತ್ತಿರ ಇಟ್ಟುಕೊಂಡು,

ಚೇತನ್  ನನ್ಫೋನಿಂದ ತನ ಮೊಬೈಲ್ಗೆ ಫೋನ್ ಮಾಡಿದಾಗ, ಆಟೋ ಡ್ರೈವರ್ ಫೋನ್ ರಿಸೀವ್ ಮಾಡಿ ಹಾಂ ಸರ್ ,ಆಪಕಾ ಮೊಬೈಲ್ ಇದರಿ ಹೈ, ಅಭಿ ಮೈ ಜೋಗೇಶ್ವರಿ ಮೆ ಹೂಂ, ಆನೆ ಕೇ ಲಿಯೆ ದಸ್ ಮಿನಿಟ್ ಲಗೇಗಾ,ಆತಾಹುಂ ಎಂದೇನು ಹೇಳಿದ.

ಆದರೆ ನನಗೆ ಟೆನ್ಷನ್, ಅಯ್ಯೋ ಇನ್ನೊಂದು ಸಲ ಫೋನ್ ಮಾಡು,ಆ ರಿಕ್ಷಾದವನ ಫೋನ್ ನಂಬರ್ ತಗೊ,ಆತನ ರಿಕ್ಷಾ ನಂಬರ್ ತಗೊ ಅಂತಾ ಮೇಲಿಂದ ಮೇಲೆ ,ಹೇಳಿದ್ದ,ಹೇಳಿದ್ದು, ಇಲ್ಲಾಂದ್ರೆ ನನ್ ಕೈಯಲ್ಲಿ ಕೊಡು ಮೊಬೈಲ್,ನಾ ಫೋನ್ ಕೇಳ್ತೀನಿ, ಎನ್ ಗ್ಯಾರಂಟಿ ಆತ ಬರುತ್ತಾನಂತ, ಹೇಳಿ ಬರಲಿಲ್ಲಂದ್ರ ಎನ್ ಮಾಡ್ತೀಯಾ, ಇವತ್ತಿನ ನಿನ್ನ ಆಫೀಸಿನ ಫೈಲ್ಸ್, ಎಲ್ಲಾ ವಿಷಯ ನಿನ್ ಮೊಬೈಲ್ ನಲ್ಲಿ ಅದಾವ.

ನೀ ಎನಪ ನಿನಗೆ ನೆನಪ್ ಇರೋದಿಲ್ಲ, ಜನರಲ್ ನಾಲೆಜ್ ಇರಬೇಕು,ಓದು ಒಕ್ಕಾಲು ಬುದ್ಧಿ ಮುಕ್ಕಾಲು ,ಅಂತ ತಲೆ ಉಪಯೋಗಿಸ ಬೇಕಾ, ಅದಕ ನಮ್ಮ ಪ್ರಾಣೇಶ  ಹೇಳೋದು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ಮಕ್ಕಳಿಗಿಂತ ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿದ ಹುಡುಗರು ಭಾಳ ಚುರುಕು ಇರ್ತಾರಂತ. ನಿನಗೇನೂ ಸ್ವಲ್ಪರಾ ಟೆನ್ಷನ್ ಇಲ್ಲ ,ಎಷ್ಟು ವರ್ಷ ಆಯಿತು ಮೊಬೈಲ್ ತಗೊಂಡು,ಎಷ್ಟು ರೇಟಿಂದ್ ಮೊಬೈಲ್ ಅಂತಾ ನನ ವಟಾ ವಟಾ ನುಡಿಗಳಿಗೆ,

ಅಯ್ಯೋ ಅಂಟಿ ಇಷ್ಟ್ಯಾಕ್ ಟೆನ್ಷನ್ ತಗೊಂತಿ ,ಆಟೋದತ ಬಂದು ಕೊಡ್ತಿನಿ ಅಂತ ಹೇಳ್ಯಾನ, ಬರ್ತಾನ,ವೇಟ್ ಮಾಡೋಣ ಇಲ್ಲೆ ಅಂತ ನಮ್ಮ ಬಿಲ್ಡಿಂಗ್ ಗೇಟ್ಹತ್ತಿರಾನೆ ನಿಂತುಕೊಂಡಿವಿ,

ಮನುಷ್ಯನ ಸ್ವಭಾವ ನೋಡಿ ಎಂತಹದು ಅಂತಾ,ಜೀವಾನೆ ಹೋಗುತ್ತೆ,ಆದರೆ ವಸ್ತುಗಳು ಕಳೆದರೆ ಎಷ್ಟೆಲ್ಲ ಟೆನ್ಷನ್ ಮಾಡ್ಕೋತಿವಿ ಅಲ್ಲವಾ,

ಹತ್ತು ನಿಮಿಷದಲ್ಲಿ ಬರ್ತಾನೆ ತಡಿ ಇಲ್ಲೆ ವೇಟ್ ಮಾಡೋಣ ಅಂತ ಅಲ್ಲೆ ನಿಂತಕೊಂಡೆ , ಕೆಲ ರಿಕ್ಷಾ ಬರ್ತಾ ಇದ್ದವು , ಎಲ್ಲರನ್ನು ಬಗ್ಗಿ ಬಗ್ಗಿ ನೋಡಿದ್ದೆ ನೋಡಿದ್ದು,

ಯಪ್ಪಾ ಕೊನೆಗೆ ಒಬ್ಬ ರಿಕ್ಷಾದವ ಸೀದಾ ನಮ್ಮ ಮುಂದೆ ಬಂದು ರಿಕ್ಷಾ ನಿಲ್ಲಿಸಿದ, ಆತನೆ ಆಗಿದ್ದ ನಾವು ಬಂದ ರಿಕ್ಷಾದವನೆ, ಇನ್ನೂ ಹರೆಯದ ಯುವಕ, ಮೊಬೈಲ್ ವಾಪಾಸ್ ಕೊಟ್ಟ, ಅವಾಗ ನೋಡಿ ನನಗೆ ಸಮಾಧಾನ ಆಯಿತು,

ಭಾಪರೆ ರಿಕ್ಷಾ ಚಾಲಕನ ನಿಷ್ಠೆ, ನಿಯತ್ತಿಗೆ ಒಂದು ಸಲಾಂ ಹೊಡೆಯುತ್ತಾ, ಥ್ಯಾಂಕ್ಯೂ ಯು ಸೋ ಮಚ್ ಬೇಟಾ,ಯುವ್ ಆರ್ ಎ ಗ್ರೇಟ್,ಅಂತಾ ಗಾಡ್ ಬ್ಲೆಸ್ ಯುವ್ ಬೇಟಾ,ಅಂತಾ ಹೇಳಿ ಅವನ ಫೋಟೋ ಕ್ಲಿಕ್ ಮಾಡಿಕೊಂಡು ಬೆನ್ನು ತಟ್ಟಿ ದೆ,

ಯಾರು ಕೊಡುತ್ತಾರೆ ಸಿಕ್ಕ ಮೊಬೈಲ್ನ, ಕಳವು ಮಾಡಿ, ಸ್ವಿಚ್ ಆಫ್ ಮಾಡಿ,ಸಿಮ್ ಕಾರ್ಡ್ ಚೇಂಜ್ ಮಾಡೋ ಇಂತಹ ಕಾಲದಲ್ಲಿ,ಅದು ಮುಂಬಯಿ ಯಂತಹ ಮಾಯಾನಗರಿ ಯಲಿ,


One thought on ““ಮೊಬೈಲ್ ಹಿಂದಿರುಗಿಸಿದ ರಿಕ್ಷಾ ಚಾಲಕನ ಪ್ರಾಮಾಣಿಕತೆ, ನಿಷ್ಠೆ”ಅನುಭವ-ಲಲಿತಾ ಪ್ರಭು ಅಂಗಡಿ

Leave a Reply

Back To Top