ಶಂಕರಾನಂದ ಹೆಬ್ಬಾಳ ಅವರ ಗಜಲ್

ಹೃದಯ ಮೂಕವಾಯಿತು ಸಂಶಯ ಊರಿದ ಮೇಲೆ
ಮನಸು ಬಂಡೆಯಾಯಿತು ಪ್ರೀತಿ ಮುರಿದ ಮೇಲೆ

ಇಂಚುಇಂಚಿಗೆ ಕದನಗೈವ ಗುಣಕೆ ಏನು ಹೇಳಲಿ
ತನುವು ಭಾರವಾಯಿತು ದ್ವೇಷವ ಸಾರಿದ ಮೇಲೆ

ಒಡಲಲಿ ಚುಚ್ಚುವ ವ್ಯಾಧಿಗೆ ಮದ್ದೆ ಇರದಾಯಿತೇ
ಸುಪ್ತಿಯೆ ಇಲ್ಲವಾಯಿತು ಬದುಕು ಉರಿದ ಮೇಲೆ

ಗುರಿಯೆ ಇಲ್ಲದ ದಾರಿಯಲಿ ಬಾಳಿನ ಪಯಣ
ಕನಸಿದು ಬರಿದಾಯಿತು ಸತ್ಯವ ಕಾರಿದ ಮೇಲೆ

ಅಭಿನವಗೆ ದುಃಖ ಉಮ್ಮಳಿಸಿ ಬಂದೀತು ನೋಡು
ಜೀವವಿದು ಕೃಶವಾಯಿತು ಒಲವು ತೀರಿದ ಮೇಲೆ


Leave a Reply

Back To Top