ರಾಜಶ್ರೀ ಜಿ. ಶೆಟ್ಟಿ ಅವರ ಕವಿತೆ-ಕವಿಯಾಗುವ ಆಸೆ..

ಕವಿಯಾಗುವ ಆಸೆ
ಕವಿಯಾಗುವ ಆಸೆಯೇಕೋ ಚಿಗುರಿದಂತಿದೆ
ಮನದೊಳಗಿನ ಭಾವನೆ ಮುದುಡಿದಂತಿದೆ
ಕಲ್ಪನೆ ಜೀವನವೋ ಜೀವನವೇ ಕಲ್ಪನೆಯೋ
ಈ ದುಗುಡ, ಈ ಪ್ರಶ್ನೆಗೆ ಉತ್ತರ ಕಾಣದಂತಿದೆ

ನನ್ನ ನಿನ್ನ ಪ್ರೀತಿಯೊಲುಮೆಗೆ
ಲೋಕದ ದೃಷ್ಟಿ ತಾಗದಿರಲಿ
ಭಾವನೆಗಳ ಬಣ್ಣ ಬೇರೆಬೇರೆ
ನಿನ್ನ ನಿನಗಿರಲಿ ನನ್ನ ನನಗಿರಲಿ

ನನ್ನ ನೆನೆದು ಸಖನೆ ಅಳಬೇಡ
ಮಧುರ ಬಾಂಧವ್ಯಕ್ಕೆ ಹೆಸರು ಬೇಡ
ನಗುಮುಖದಿ ಬಂದದ್ದನ್ನೆಲ್ಲ ಆಸ್ವಾದಿಸು
ಜೀವನ ಐಸ್ಕ್ರೀಂನಂಥ ಅತ್ತು ಕರಗಿಸಬೇಡ

ಭೃಮೆಗಳ ಲೋಕ ನಮಗ್ಯಾಕ ಬೇಕ
ಈ ಜೀವನದಲ್ಲೇ ಸಿಗುವುದು ಸ್ವರ್ಗ ನರಕ
ಹುಟ್ಟು ಸಾವಿನ ನಡುವಿನ ಈ ಬದುಕ
ಬದುಕಲೇ ಬೇಕು ಬದುಕಿರುವ ತನಕ

3 thoughts on “ರಾಜಶ್ರೀ ಜಿ. ಶೆಟ್ಟಿ ಅವರ ಕವಿತೆ-ಕವಿಯಾಗುವ ಆಸೆ..

Leave a Reply

Back To Top