ಎ.ಎನ್.ರಮೇಶ್.ಗುಬ್ಬಿ. ಕವಿತೆ-ವೈರುಧ್ಯಗಳು..!

ಮೇಧಾವಿಗಳಿಗಿಂತ ಮೂರ್ಖರೇ
ವಾದಿಸುವುದು ಜಾಸ್ತಿ.!

ಪ್ರಾಮಾಣಿಕರಿಗಿಂತ ವಂಚಕರೇ
ಬೋಧಿಸುವುದು ಹೆಚ್ಚು.!

ಪರಾಕ್ರಮಿಗಳಿಗಿಂತ ಹೇಡಿಗಳೇ
ಕೊಚ್ಚಿಕೊಳ್ಳುವುದು ಅಧಿಕ.!

ಸಾಧಿಸಿದವರಿಗಿಂತ ಸಂಗಡಿಗರೇ
ಹಾರಾಡುವುದು ವಿಪರೀತ.!

ಹಿತೈಶಿಗಳಿಗಿಂತ ಹಿತಶತೃಗಳೇ
ಸಂತೈಸುವುದು ಭರಪೂರ.!

ಪರಿಶ್ರಮಿಗಳಿಗಿಂತ ಮೈಗಳ್ಳರೇ
ಹೇಳಿಕೊಳ್ಳುವುದು ದಿನವೆಲ್ಲ.!

ಒಳ್ಳೆಯವರಿಗಿಂತ ಕೆಡುಕೆಣಿಸುವರೇ
ಸಿಹಿನುಡಿವುದು ಸಿಕ್ಕಾಗಲೆಲ್ಲ.!

ಹೊರಗಿನವರಿಗಿಂತ ಒಳಗಿನವರೇ
ತುಂಬಿಕೊಳ್ಳುವುದು ಹೊಟ್ಟೆಕಿಚ್ಚು.!

ನೈಜತೆಗಿಂತ ಕೃತ್ರಿಮತೆಯವರೇ
ಹೊಳೆಯುವುದು ಹೆಚ್ಚೆಚ್ಚು.!

ಕರುಣಿಗಳಿಗಿಂತ ಕಡಿಯುವವರೇ
ಹಾರಹಾಕುವುದು ಹಿಗ್ಗಿ.!

ಏಳಿಸುವರಿಗಿಂತ ಕಾಲೆಳೆಯುವರೇ
ನಮಿಸುವುದು ಶಿರಬಾಗಿ.!

ಯೋಗ್ಯರಿಗಿಂತ ಅಯೋಗ್ಯರೇ
ತೋರಿಸಿಕೊಳ್ಳುವುದು ಮೆರೆದು.!

ಅನ್ನವಿಡುವರಿಗಿಂತ ವಿಷವಿಕ್ಕುವರೇ
ಆದರಿಸುವುದು ಕರೆಕರೆದು.!

ಉದ್ದರಿಸುವರಿಗಿಂತ ಹಾಳುಮಾಡುವವರೇ
ಹಾಲೆರೆಯುವುದು ಪ್ರತಿನಿತ್ಯ.!

ಎದುರಿನವರಿಗಿಂತ ಜೊತೆಗಿದ್ದವರೇ
ಬೆನ್ನಿಗಿರಿವುದು ಅಕ್ಷರಶಃ ಸತ್ಯ.!

One thought on “ಎ.ಎನ್.ರಮೇಶ್.ಗುಬ್ಬಿ. ಕವಿತೆ-ವೈರುಧ್ಯಗಳು..!

Leave a Reply

Back To Top