ಸುಜಾತಾ ರವೀಶ್ ಅವರ ಗಜಲ್

ಭಾವನೆ ಹರಿವಿಗೆ ಹೇರು ಮಿತಿಯ ಮನಸನು ಮಾರದಂತೆ
ಸಾವಿನ ಭಯವನು ಮೀರು ಜೀವದ ರಸವನು ಹೀರದಂತೆ

ವಾತ್ಸಲ್ಯ ಕೃತಿಯಲ್ಲಿ ಇಡು ಪ್ರೀತಿಯು ಕಾಣುವುದೇ ಮೌನದಲಿ
ಮಾತ್ಸರ್ಯ ಬದುಕಿಗೆ ಕೇಡು ಮಾತಿನಲಿ ಬಿಗಿಯಿಡು ಜಾರದಂತೆ

ಸಹನೆ ತಿಳಿವಿನ ಪಾಡು ಸರಳತೆ ಮೆರೆಯಲಿ ನಡತೆಯಲಿ
ಇಹದ ಒಳಿತಿಗೆ ಈಡು ಗರಳದ ವಿರಸವ ಕಾರದಂತೆ

ಸನ್ಮಾನ ದೊರೆವುದು ಬಾಗು ಸಜ್ಜನತೆ ಇರುತಿರೆ ಬಾಳಿನಲಿ
ಸನ್ಮಾರ್ಗ ಹಿಡಿಯುತ ಸಾಗು ಸುಖವದು ಹಿಡಿಯಿಂದ ಸೋರದಂತೆ

ಪ್ರಗತಿ ಸಿಗುವುದು ನೋಡು ನಂಬಿಕೆಯ ಪಾಲನೆಯ ನಡೆಯಲಿ
ಪ್ರಮತಿ ಬೆಳಕಲಿ ಹಾಡು ಅವಿಶ್ವಾಸದ ತಮವನು ಸೇರದಂತೆ


2 thoughts on “ಸುಜಾತಾ ರವೀಶ್ ಅವರ ಗಜಲ್

  1. ಅಂದವಾಗಿ ಪ್ರಕಟಿಸಿ ಸದಾ ಪ್ರೋತ್ಸಾಹ ನೀಡುವ ಸಂಪಾದಕರಿಗೆ ಅನಂತ ಧನ್ಯವಾದಗಳು

    ಸುಜಾತಾ ರವೀಶ್

  2. ಅಂದ ಚೆಂದದ ಅರ್ಥ ಪೂರ್ಣ ಸಾಲು ನಿಮ್ಮ ಬರವಣಿಗೆ ನಿಮ್ಮ ಮುಗ್ಧ ಪ್ರೀತಿ ಅಮೂಲ್ಯವಾದದು ಎಲ್ಲರು ಮೆಚ್ಚುವಂತದ್ದು

Leave a Reply

Back To Top