ಕಾವ್ಯ ಸಂಗಾತಿ
ಲೋಹಿತೇಶ್ವರಿ ಎಸ್ ಪಿ
ಮಾಯೆ
ಧನವೆಂಬ ಮಾಯೆ
ಬರಿಯ ಮಾಯೆ ಅಲ್ಲ
ಮನವನೇ ಮಾಯವಾಗಿಸುವ
ಮಾಯಾವಿ
ಬಂಧಗಳನ್ನೆಲ್ಲಾ…..ಬಂಧನವಾಗಿಸಿ…
ಒಂದೇ ಕ್ಷಣಕೆ ಉಸಿರುಗಟ್ಟಿಸಿ
ಜೀವ ಕಳೆವ ಮಾಯೆ….
ಅದರ ಪರವಾಗಿಯೇ
ನವಿರಾಗಿ ಸಾಗುತ್ತಿದ್ದ
ಬಾಳು
ಬಾಳಿನ ತುಂಬೆಲ್ಲಾ
ಇಂಚರದಂತಹ ಬಂಧ
ಬಂಧದ ಬಿಗಿಅಪ್ಪುಗೆಯಲಿ
ಬೆಚ್ಚಗಿನ ಭಾವ
ಜೀವನವೇ ಸುಖದ
ಸಾಗರದಂತಿತ್ತು
ಆದರೆ ಅಂದು ಹಣವಿರಲಿಲ್ಲ…!
ಎಲ್ಲವೂ ಕಳೆದುಕೊಂಡ
ಭಾವ
ನಿನಗೆ ನಾನೇ ಎಲ್ಲಾ ಎಂದು
ಮುದ್ದಿಸಿದ ಕೈಗಳು
ಕುತ್ತಿಗೆ ಹಿಸುಕಿ
…….ಕಾಲ
ಭದ್ರತೆಯ ಅಪ್ಪುಗೆ
ಮಾಯವಾಗಿ
ಬಂಜರು ಭೂಮಿಯಲ್ಲಿ
ಒಂಟಿಯಾಗಿ ನಿಂತ
ಭಾವ
ನಿಜ ಪ್ರೀತಿಗಾಗಿ
ಹಾತೊರೆಯುತಿರುವ
ಕಾಲ
ಇಂದು
ಒಲವು ಮಾತ್ರ ಇಲ್ಲ
ಎಲ್ಲವೂ ಮಾಯಾವಿಯ ಮಾಯೆ…..
—————————
ಲೋಹಿತೇಶ್ವರಿ ಎಸ್ ಪಿ