ಅನುರಾಧಾ ರಾಜೀವ್ ಸುರತ್ಕಲ್- ಗಜಲ್

[ನಂಬಿದ ಹೃದಯಕೆ ಹಿಂಡದೇ ಹುಳಿಯನು
ಬಾಳಿಗೆ ಹಾಲೋಗರ ಎರೆಸು
ತುಂಬಿದ ಸಂಸಾರದ ಕಣ್ಣಾಗಿ ಬೆಳಕನು
ನೀಡುವ ಸಂಸ್ಕಾರವ ಬೆರೆಸು

ಸಮಾನ ಮನಸ್ಥಿತಿ ಪರಸ್ಪರ ಅರಿಯಲು
ಸ್ಪೂರ್ತಿದಾಯಕವಲ್ಲವೇ
ಸುಮ್ಮಾನ ತೋರುತ ಒಲವಿನ ಧಾರೆಯನು
ಹರಿಸಿ ದುಗುಡವ ಮರೆಸು

ತುಳಿದು ಸಪ್ತಪದಿ ಜೊತೆಗೆ ನಡೆಯುವ
ಭರವಸೆ ಕೊಟ್ಟಿರುವೆ ದೈರ್ಯದಿ
ಮಳೆಯ ಹನಿಯಂತೆ ಸುರಿಯುವ ನೆನಪಲಿ
ಪ್ರೇಮದ ಬಾಗಿಲನು ತೆರೆಸು

ಸಂಬಂಧದ ಎಳೆಯು ಸೂಕ್ಷ್ಮವಾದ ದಾರದಂತೆ
ಕಾಯಬೇಕು ಜೋಪಾನವಾಗಿ ಕೆಡದಂತೆ
ಅಭಿಮಾನ ಗೌರವ ಬೆಳೆಸುತ ಜೀವನದಿ
ನೈಜ ಸ್ವಂತಿಕೆಯ ಮೆರೆಸು

ಅಪಾರ್ಥ ಮಾಡದೆ ಅಂತರಂಗ ಭಾವನೆಯ
ಹಂಚಿಕೋ ಮಧುರ ಕ್ಷಣವು
ತಂಪಿನ ಸೊಂಪಿನಲಿ ರಾಧೆಯ ಜೀವಕೆ
ಜೇನಿನ ಸವಿಯನು ಬೆರೆಸು

ಅನುರಾಧಾ ರಾಜೀವ್ ಸುರತ್ಕಲ್

—————————

Leave a Reply

Back To Top