ಜಯದೇವಿ ಆರ್ ಯದಲಾಪೂರೆ ಕವಿತೆ-ದೇವದಾಸಿ

ಯಾವ ಜನ್ಮದ ಶಾಪವೋ
ತಳಸಮುದಾಯದಲ್ಲಿ ಜನನವೊ
ಕತ್ತಲೆ ಕೂಪದಲ್ಲಿ ಜೀವನವು

ಮೌಡ್ಯೆತೆಯ ಅಂಧ ಭಕ್ತರು
ದೇವಿಗೆ ಹರಕೆ ಹೊರುವರು
ದೇವದಾಸಿಯಾಗಿ ಬಿಡುವರು

ಗುಡಿಯ ಅಂಗಳುಗಳಲ್ಲಿ
ತಮಟೆಯ ಸದ್ದುಗಳಿಗೆ
ಕುಣಿದು ರಂಜಿಸುವಳು ರಸಿಕರಿಗೆ

ಸತ್ತ   ಪ್ರಾಣಿ ಪಕ್ಷಿಗಳನ್ನು
ಕೊಕ್ಕಿ ತಿನ್ನುವ ರಣ ಹದ್ದುಗಳಂತೆ
ಕಿತ್ತು ತಿನ್ನುವರು ನಿತ್ಯ ಕಾಮುಕರು

ಒಮ್ಮೆ ಬಂದು ಅಪ್ಪಿಕೊಂಡವರು
ಮತ್ತೆ ತಿರುಗಿ ಬಾರದವರು
ಹುಟ್ಟಿದ ಮಕ್ಕಳಿಗೆ ಅಪ್ಪನ ಹೆಸರಾಗದವರು

ಬಡತನದ ಬಾಹು ಸಲಿಲವಲ್ಲ
ಮಕ್ಕಳ ನಾಳೆಯ ಕನಸುಗಳಿಗೆ ಬೆಳಕಿಲ್ಲ
ನೋವಿನ ಗೊಂಚಲ ಭಾರ ಮೈಯಲ್ಲ

ಕಷ್ಟದಲ್ಲಿ ಬೆಂದ ಗಟ್ಟಿ ಜೀವ
ಉರುಳನ್ನು ಜಾರಿ ಬದುಕಿ ಬಂದು
ಬೆಳಕು ಕಾಣುವ ಹಂಬಲ

ತೊಗಲಲಿ ದರಿದ್ರ ಮೌಡ್ಯೆತೆ
ಸಿಗಲಿ ಮಹಿಳೆಗೆ ಮಾನ್ಯತೆ
ಸಹಾನುಭೂತಿ ಬೇಕಿಲ್ಲ ಸಹಾಯಹಸ್ತ ನೀಡಿ
ಆಗತಾನೆ ಜನನಿ ತಾನು ಧನ್ಯಳಾದಳು




ಜಯದೇವಿ ಆರ್ ಯದಲಾಪೂರೆ 

Leave a Reply

Back To Top