ಡಾ.ಕಸ್ತೂರಿ ದಳವಾಯಿ ಕವಿತೆ ಭೂಮಿಗೆ ಭಾರವಲ್ಲ

ಭೂಮಿಗೆ ಭಾರವಲ್ಲ
ಭೂತಾಯಿ ನಿನ್ನೂಡಲ
ಕರುಳಕುಡಿ ನಾನು
ನೀನು ಉತ್ತಿಸಿ ಕೊಂಡು
ಬಿತ್ತಿಸಿಕೂಂಡು ಹೊರ
ಸೂಸಿಸಿದ ಅಂಕುರದಿ
ಕೊಟ್ಟ ಧವಸ.ಧಾನ್ಯ
ಉಂಡು ಉಟ್ಟು
ಸುಖಿಸಿದ ಕೂಸು
ನಾನು.ನೀರು ಕಾಯ್ದು
ಆವಿಯಾಗಿ ಮೇಲೆ ಹೋಗಿ
ಮೋಡಕಟ್ಟಿ
ತಂಪು ತಗಲಿದಾಗ
ಆದ ಮುಂಗಾರು
ಮಳೆ ಹನಿ ಲೀಲೆಗಳ
ಚೆಲ್ಲಾಟವಾಡಿ
ಮರಳ ಮನೆ
ಕಟ್ಟಿ.ಮಕ್ಕಳ
ಜೊತೆ ಗೂಡಿ
ಆಟವಾಡಿದ
ನಾವು ನಿನಗೆ
ಭಾರವಲ್ಲವಲ್ಲ
ತಾಯೆ
ಬೀಸುವ ತಂಗಾಳಿ
ತಂಪೆಲರ
ಒಡಗೂಡಿ. ಹಕ್ಕಿ
ಹಂಸಗಳ ನೋಡಿ
ನಲಿಸಿದ ಸಂಗೀತ
ಸಂಭ್ರಮ ನಿನ್ನೂಟ್ಟಗೆ
ಭೂತಾಯಿ ನಿನಗೆ

ಭಾರವಲ್ಲಾ


Leave a Reply

Back To Top