ಮಕ್ಕಳ ಸಂಗಾತಿ
ಶಿವಮ್ಮ ಎಸ್ ಜಿ ಕೊಪ್ಪಳ
ಜಿಂಕೆ ಮರಿ
ಜಿಂಕೆ ಮರಿ ಇಲ್ಲಿ ಬಾಬಾ
ಹುಲ್ಲೆ ಮರಿ ನೀನು ಬಾ ಬಾ.
ಬಾ ಬಾ ನಮ್ಮಯ ತೋಟಕ್ಕೆ.
ಹುಲ್ಲನು ಕೊಡುವೆ ಊಟಕ್ಕೆ.
ಆಡುವ ಬಾ ಬಾ ಗೆಳೆಯನೆ.
ಹಾಡುವ ಬಾ ಬಾ ಮಿತ್ರನೆ.
ಆಡುತಾ ಹಾಡುತಾ ಕುಣಿಯುವ ಬಾ.
ಕುಣಿಯುತಾ,ಜಿಗಿಯುತಾ ನಲಿಯುವ ಬಾ.
ನನಗೂ ಕುಣಿಯಲು ಕಲಿಸುವೆಯಾ?
ನನಗೂ ಜಿಗಿಯಲು ಕಲಿಸು ವೆಯಾ?
ನೀನು ಕುಣಿಯಲು ನಲಿಯುವೆನು.
ನೀನು ಜಿಗಿಯಲು ಜಿಗಿಯುವೆನು.
ಹುಲ್ಲು ನಿನ್ನಯ ಊಟವು ಹುಲ್ಲೆನಿನ್ನ ನಾಮಾಂಕಿತವು.
ಜಿಗಿತವೇ ನಿನ್ನಯ ಆಟವು.
ಗೆಳೆಯರೇ ನಮ್ಮಕೂಟವು.
ನಿನ್ನಯ ರೂಪವೇ ಸುಂದರ.
ನೀನೇ ಪ್ರೀತಿಯ ಚಂದಿರ.
ಮೈ ಮೇಲೆ ಸಾಲು ಚುಕ್ಕಿ.
ನಿನ್ನ ನೋಟ ಹೆದರಿದ ಹಕ್ಕಿ.
ಶಿವಮ್ಮ ಎಸ್ ಜಿ ಕೊಪ್ಪಳ
Super akka
Super