ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್
ಒಲುಮೆಯ ಬಣ್ಣದೋಕುಳಿಯಲಿ ಮೀಯಿಸಿದವ ಎಲ್ಲಿ ಹೋದೆ
ಇರುಳು ಕನಸಲಿ ಕಚಗುಳಿಯಿಟ್ಟು ನಗಿಸಿದವ ಎಲ್ಲಿ ಹೋದೆ
ಸುಳಿಗಾಳಿಗೆ ಸೆರಗು ಪತಂಗವಾಗಿ ಹಾರುತಿದೆ ಬಾನಿಗೆ
ಕೆನ್ನೆಗೆ ಮುತ್ತಿಕ್ಕಿ ಮುಂಗುರುಳ ಸರಿಸಿದವ ಎಲ್ಲಿ ಹೋದೆ
ಶಶಿ ಅಪ್ಪುಗೆಯಲಿ ವಾರಿಧಿ ಉಕ್ಕಿ ಸಂತಸದಿ ನಲಿಯುತಿದೆ
ಯಮುನೆಯ ತಟದಿ ರಾಸಲೀಲೆ ಆಡಿಸಿದವ ಎಲ್ಲಿ ಹೋದೆ
ಕೊಳದಿಂದ ಹೊರ ಬರಲಾರದೆ ಚಡಪಡಿಸುತಿವೆ ಜೀವಿಗಳು
ಕಳಚಿಟ್ಟ ಉಡುಪುಗಳ ಕದ್ದು ಕಾಡಿಸಿದವ ಎಲ್ಲಿ ಹೋದೆ
ವ್ಯಾಮೋಹದ ಗುಂಗಿನಲಿ ಚಂದಿರ ತಾರೆ ಮುಸುಕುಹಾಕಿವೆ
ಮೋಹದಿ ಬಂಧಿಸಿ ಪ್ರಭೆಯ ಹರೆ ದಣಿಸಿದವ ಎಲ್ಲಿ ಹೋದೆ
ಪ್ರಭಾವತಿ ಎಸ್ ದೇಸಾಯಿ
ಶೃಂಗಾರ ಕವನ ಚೆನ್ನಾಗಿದೆ ಮೇಡಂ ಧನ್ಯವಾದಗಳು
ಚಂದ ಗಜಲ್
ಬಾಗೇಪಲ್ಲಿ
Nice
ಶೃಂಗಾರ ಕವನ ಚೆನ್ನಾಗಿದೆ ಮೇಡಂ ಧನ್ಯವಾದಗಳು
Romantic Gajal ma..super
ತುಂಬಾ ಸುಂದರ ರಚನೆ ಅಕ್ಕ..
ಹಮೀದಾ ಬೇಗಂ ದೇಸಾಯಿ ಸಂಕೇಶ್ವರ
So sweet ,socute and very nice gajal