ನೀನು ನೀನೇ ಆಗಿರು
ನಾನು ನಾನೇ ಆಗಿರುವೆ
ನಾನು ಹೆಚ್ಚಲ್ಲ
ನೀನೇನು ಕಡಿಮೆಯಲ್ಲ
ನಾವಿಬ್ಬರೂ ನೋವಿಗೆ
ಒಬ್ಬರಿಗೊಬ್ಬರು ಹೆಗಲಾಗುವ
ನಮ್ಮ ಖುಷಿಗೆ
ಜೊತೆಯಾಗಿ ಶ್ರಮಿಸುವ
ಬದುಕಲ್ಲಿ ಒಂದಾಗಿ
ಮುನ್ನುಗ್ಗುವ
ಜೊತೆಯಾಗಿ ಕೈ ಹಿಡಿದು
ಭರವಸೆಯ ಬೆಳಕಾಗುವ
ಜೀವ ಜೀವನದ ಗೆಲುವಿಗೆ
ಒಂದಾಗುವ
ನೀನು ನನ್ನೊಳಗೆ ನಾನು
ನಿನ್ನೊಳಗೆ ಇದ್ದುಬಿಡುವ
ನಮ್ಮ ಕನಸುಗಳ ಬೆಂಬತ್ತಿ
ನನಸಾಗಿಸುವ
ಜೊತೆಯಾಗಿ ಗೆಲುವಿನ
ನಗೆ ಬೀರುವ
ನಗು ನಗುತಾ ಜೀವನವ
ಕಳೆದು ಬಿಡುವ

—————————–

Leave a Reply

Back To Top