ವ್ಯಾಸ ಜೋಶಿ ರಂಗಭೂಮಿ ದಿನಕ್ಕಾಗಿ ತನಗಗಳು

ಒಮ್ಮೆ ಮಾತ್ರ ಚಿತ್ರಣ
ಬೆಳ್ಳಿ ತೆರೆಯ ಸ್ವತ್ತು,
ನಿತ್ಯ ಹೊಸ ಪ್ರಯೋಗ
ರಂಗಭೂಮಿಯ ಗತ್ತು.


ದೊಡ್ಡದು ಬೆಳ್ಳಿತೆರೆ
ಚಿಕ್ಕ ದೂರದರ್ಶನ
ರಂಗ ಭೂಮಿಯ ಇಂಬು
ನೈಜ ಜೀವನ ಬಿಂಬ.


ರಂಗದ ನಟನೆಗೆ
ಇರಲಿ ಪುರಸ್ಕಾರ.
ಬಾಳಲ್ಲಿಯ ನಾಟಕ
ಉಗಿದು ತಿರಸ್ಕಾರ.


ವಿಶ್ವವೇ ರಂಗಭೂಮಿ
ಕಾಣದ ನಿರ್ದೇಶಕ-
-ಆಡಿಸಿದಂತೆ ಆಡುವ
ಕಲಾವಿದರು ನಾವು.


ಪ್ರೀತಿ ಪ್ರೇಮ ಮಮತೆ
ಹಾಸ್ಯ, ಸುಖ ದುಃಖಕ
ಸುಳ್ಳು-ಸತ್ಯಕ್ಕೂ  ಬಣ್ಣ.
ಜೀವನವೇ ನಾಟಕ.

——————————————-

Leave a Reply

Back To Top