ನಾಡಿನ ಹೆಸರಾಂತ ಸಾಹಿತಿ ಸಂಶೋಧಕ
ಡಾ ಗುರುಲಿಂಗ ಕಾಪಸೆ ಅವರು
ಇಂದು 27 ಮಾರ್ಚ್ ಬಯಲಾದರು.
ಅವರಿಗೆ ಭಾವಪೂರ್ಣ ನಮನಗಳು
ಬಯಲು ಸಂಗಮ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ನಿನ್ನ ಹ್ಯಾಂಗ
ಹಿಡಿಯಲಿ
ಕೆಲವು ಸಾಲಿನ ಕವನ
ಕನ್ನಡದ ಮುಡಿಗೆ
ನೀನಾದೆ ದವನ
ಹಳ್ಳಿಯ ಹುಡುಗ
ಸೈಕಲ್ಲಿನ ಜೋಡ
ಮನೆಯ ಮಗನಾದೆ
ಮಧುರ ಚೆನ್ನ
ಅರವಿಂದರ ಅರಿವು
ಶರಣರ ಸೂಳ್ನುಡಿಯು
ಅಕ್ಕ ಸಿದ್ಧರಾಮ
ಬಸವನ ಬೆಳಕು
ಮುಲ್ಕಿ ಶಿಕ್ಷಣ
ಮಾಸ್ತರನ ಪಯಣ
ವಿಶ್ವ ವಿದ್ಯಾಲಯ
ತಲೆ ಬಾಗಿತು
ನಿನ್ನ ನಯನ
ಅಧ್ಯಾತ್ಮ ಚಿಂತನ
ಅನುಭಾವ ಚೇತನ
ಕೈ ಮಾಡಿ ಕರೆಯಿತು
ಧಾರವಾಡ ತಪೋವನ
ಹಲವು ಗರಿಗಳ ಸಾಧನ
ನಿಮಗಿತ್ತ ಸನ್ಮಾನ
ಬಡವಾಯಿತು ಸಾಹಿತ್ಯ
ಬೆಂದ ತನು ಮನ
ಚೆನ್ನಮಲ್ಲರ ಕೃಪೆ
ಗುರು ಲಿಂಗ ಜಂಗಮ
ಬಿಟ್ಟು ಹೋದಿರಿ ಭುವಿಯ
ಬಯಲು ಸಂಗಮ
̲̲̲̲̲̲̲
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಅರ್ಥಪೂರ್ಣ ಕವನ ಸರ್
ಕವಿತೆ ತುಂಬಾ ಚೆನ್ನಾಗಿ ಬರೆದಿದ್ದೀರಿ.ಕಣ್ಣು ತೇವವಾಯಿತು.
ಭಾವ ಪೂರ್ಣ ಕವನ ಸರ್
ಅರ್ಥಗರ್ಭಿತ ಕವನ ಸರ್
Great poem obituary
ಅರ್ಥಗರ್ಭಿತ ಕವನ ಸರ್
ಕಾವ್ಯ ನಮನ ಸುಂದರ ಕವನ
ಗುರುವಿನ ಗುರು ಡಾ ಗುರುಲಿಂಗ ಸರ್ ಗೆ ನಮನ
ಸರ್… ನಾನು ಗುರುಲಿಂಗ ಕಾಪ್ಸೆ ಅವರನ್ನು
ನೋಡಿರಲಿಲ್ಲ… ಆದರೆ ನಿಮ್ಮ ಕವನದ ಮೂಲಕ ಅವರ ಇಡೀ ವ್ಯಕ್ತಿತ್ವವನ್ನು ಅತ್ಯಂತ
ಗೌರವ ಮತ್ತು ಹೆಮ್ಮೆಯ ಭಾವನೆಯೊಂದಿಗೆ ನಮಗೆಲ್ಲ ತಿಳಿಸಿಕೊಟ್ಟಿದ್ದೀರಿ… ಧನ್ಯವಾದಗಳು
ಸುಶಿ
Excellent tribute to great laureate